ಕರ್ನಾಟಕ ಯುವಜನ ಕ್ರೀಡಾಸಂಸ್ಥೆ,ಎಸ್.ಜಿ.ಎಸ್ ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನ ಸಂಸ್ಥೆ, ಯುವ ಸಬಲೀಕರಣ ಕ್ರೀಡಾ ಇಲಾಖೆ ಕರ್ನಾಟಕ ಸರಕಾರ ಹಾಗೂ ನೆಹರು ಯುವ ಕೇಂದ್ರ ಭಾರತ ಸರಕಾರ ಯೋಗಾಸನ ಭಾರತ್ ಸಹಕಾರದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ
ಜು.14 ರಂದು ಅಂತರ್ ರಾಜ್ಯ ಮಟ್ಟದ ಯೋಗ ಸ್ಪರ್ಧೆಯು ನಡೆಯಿತು.
ಸ್ಪರ್ಧೆಯಲ್ಲಿ ಸುಳ್ಯ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಾದ
8 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ವಿಧಾತ್ ಮುಡೂರು, ಪ್ರಥಮ, ಆಶ್ರಿತ್ ಎ. ಸಿ ಅಮೆಮನೆ ದ್ವಿತೀಯ,
8ರಿಂದ12ವಯೋಮಾನದ ಬಾಲಕ ವಿಭಾಗದಲ್ಲಿ ಶ್ರೀಶೌರ್ಯ5 ನೇ ಸ್ಥಾನ, 8ರಿಂದ12ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹಾರ್ದಿಕ ಕೆರೆಕ್ಕೋಡಿ ಪ್ರಥಮ,
12 ರಿಂದ 15 ವರ್ಷದ ಬಾಲಕರ ವಿಭಾಗದಲ್ಲಿ ತನುಷ್ ಕೆ ಆರ್.
ನಾವೂರು 8 ನೇ ಸ್ಥಾನ,
15 ರಿಂದ 20 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕ್ಷಮ ಮುಡೂರು ಪ್ರಥಮ ಹಾಗೂ ಸ್ವಂತ ಆಯ್ಕೆ ವಿಭಾಗದಲ್ಲಿ ಹಾರ್ದಿಕ ಕೆರೆಕ್ಕೋಡಿ ದ್ವಿತೀಯ, ಸೋನಾ ಅಡ್ಕಾರ್ ಚತುರ್ಥ ಸ್ಥಾನವನ್ನು ಪಡೆದು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಶಿಕ್ಷಕ ಸಂತೋಷ್ ಮುಂಡಕಜೆ ಮತ್ತು ಪ್ರಶ್ವಿಜಾ ಸಂತೋಷ್ ರವರು ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದರು.