ತೊಡಿಕಾನ : ಮುಖ್ಯರಸ್ತೆಗೆ ಬಂದ ಹೊಳೆನೀರು

0

ತೊಡಿಕಾನ ಹಾಗೂ ನೆರೆಯ ಕೊಡಗು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತೊಡಿಕಾನ ಹಾಲು ಸೊಸೈಟಿ ಬಳಿ ಹೊಳೆ ನೀರು ರಸ್ತೆಗೆ ಬಂದಿರುವುದಾಗಿ ತಿಳಿದುಬಂದಿದೆ.

ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಲಘು ವಾಹನ ಸಂಚಾರಕ್ಕೆ ತೊಡಕಾಗಿದ್ದು, ಮಳೆ ಇದೇ ರೀತಿ ಮುಂದುವರಿದರೆ ನೀರಿನ ಹರಿವು ಹೆಚ್ಚಾಗಿ ತೊಡಿಕಾನ – ಅರಂತೋಡು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಲಿದೆ.