ಕಲ್ಲುಗುಂಡಿ: ಸ್ಕೂಟಿಗೆ ಢಿಕ್ಕಿಯಾಗಿ ಪರಾರಿಯಾದ ಕಾರು

0

ಸಂಪಾಜೆ ಗೇಟಿನಲ್ಲಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ ಪೊಲೀಸರು

ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದು ನಿಲ್ಲಿಸದೇ, ಪರಾರಿಯಾಗಲು ಯತ್ನಿಸಿದ ಕಾರನ್ನು ದೂರವಾಣಿ ಕರೆ ಮಾಡಿ ಹೇಳಿದ ಮಾಹಿತಿ ಆಧಾರದಲ್ಲಿ ಕೊಡಗು ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಪೊಲೀಸರು ಅಡ್ಡಗಟ್ಟಿ ನಿಲ್ಲಿಸಿದ ಘಟನೆ ಜು.18ರಂದು ಸಂಜೆ ವರದಿಯಾಗಿದೆ.

ದ.ಕ. ಸಂಪಾಜೆ ಗ್ರಾಮದ ಚಟ್ಟೆಕಲ್ಲು ನಿವಾಸಿ ಮಾದವ ಬಂಟೋಡಿ ಅವರು ಕಲ್ಲುಗುಂಡಿಯ ರಾಘವೇಂದ್ರ ಬೇಕರಿ ಬಳಿ ಸಿಗ್ನಲ್ ಹಾಕಿ ಸ್ಕೂಟಿಯನ್ನು ತಿರುಗಿಸುವ ವೇಳೆ ಸುಳ್ಯ ಭಾಗದಿಂದ ಅತೀ ರಭಸವಾಗಿ ಬಂದ ಕಾರು ಸ್ಕೂಟಿಗೆ ಢಿಕ್ಕಿ ಹೊಡೆದಿದ್ದು, ಸವಾರ ಮಾದವ ಅವರ ಕೈಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.


ಢಿಕ್ಕಿ ಹೊಡೆದ ಕಾರು ಚಾಲಕ ನಿಲ್ಲಿಸದೇ ಮಡಿಕೇರಿ ಕಡೆಗೆ ಪರಾರಿಯಾಗಿದ್ದು, ಕಲ್ಲುಗುಂಡಿಯ ಯುವಕರು ತಕ್ಷಣ ಕೊಡಗು ಸಂಪಾಜೆ ಪೊಲೀಸ್ ಉಪಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಖಚಿತ ಮಾಹಿತಿ ಪಡೆದ ಪೊಲೀಸರು ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಕಾರನ್ನು ತಡೆದು ನಿಲ್ಲಿಸಿ, ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಟಯರ್ ಪಂಕ್ಚರ್ ಆಗಿರುವುದಾಗಿ ತಿಳಿದುಬಂದಿದೆ.