ಜಾಲ್ಸೂರು: ಅಸೌಖ್ಯದಿಂದಿದ್ದ ಬೇಬಿ ಆಚಾರ್ತಿ ನಿಧನ

0

ಜಾಲ್ಸೂರಿನ ಕದಿಕಡ್ಕದಲ್ಲಿ ವಾಸವಿದ್ದ ಬೇಬಿ ಆಚಾರ್ತಿ ಅವರು ಅಸೌಖ್ಯದಿಂದಾಗಿ ಜು.22ರಂದು ಬೆಳಿಗ್ಗೆ ನಿಧನರಾಗಿರುವುದಾಗಿ ತಿಳಿದುಬಂದಿದೆ.

ಅವಿವಾಹಿತರಾಗಿದ್ದ ಅವರಿಗೆ 63 ವರ್ಷ ವಯಸ್ಸಾಗಿತ್ತು.
ಬೇಬಿ ಆಚಾರ್ತಿ ಹಾಗೂ ಭಾರತಿ ಎಂಬ ಇಬ್ಬರು ವಯೋವೃದ್ಧೆಯರು ಕಳೆದ ಮೂವತ್ತೈದು ವರ್ಷಗಳಿಂದ ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಟರ್ಪಲ್ ಹಾಸಿದ ಗುಡಿಸಲಿನಲ್ಲಿ ವಾಸವಾಗಿದ್ದು, ಇತ್ತೀಚೆಗೆ ಅವರ ಸಂಕಷ್ಟದ ಬದುಕಿನ ಕುರಿತಂತೆ ಸುದ್ದಿ ಪತ್ರಿಕೆ ಮತ್ತು ಚಾನೆಲ್ ನಲ್ಲಿ ವರದಿ ಪ್ರಸಾರಗೊಂಡಿತ್ತು. ಇದಕ್ಕೆ ಸ್ಪಂದಿಸಿದ ಟೀಂ ಸ್ಕಂದ ಅಡ್ಕಾರು ಹಾಗೂ ಪುತ್ತಿಲ ಪರಿವಾರ ಸಂಘಟನೆಯ ವತಿಯಿಂದ ಜಾಲ್ಸೂರು ಗ್ರಾಮ ಪಂಚಾಯತಿ ಸಹಕಾರಧಲ್ಲಿ ತಾತ್ಕಾಲಿಕ ಮನೆಯನ್ನು ನಿರ್ಮಿಸಿ ಕೊಟ್ಟಿದ್ದರು.
ಅಸೌಖ್ಯಕ್ಕೆ ಒಳಗಾಗಿ ಸರಿಯಾಗಿ ನಡೆಯಲು ಆಗದೆ ಬೇಬಿ ಅವರು ಜೀವನ ನಡೆಸುತ್ತಿದ್ದು, ನಿನ್ನೆ ರಾತ್ರಿಯಿಂದ ನೀರು ಮತ್ತು ಆಹಾರ ಸೇವಿಸುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಇದೀಗ ಜಾಲ್ಸೂರು ಗ್ರಾಮ ಪಂಚಾಯತಿ ವತಿಯಿಂದ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಿರುವುದಾಗಿ ತಿಳಿದುಬಂದಿದೆ.