ಗೂನಡ್ಕ: ವರಮಹಾಲಕ್ಷ್ಮಿ ಸಮಿತಿ ಪೂರ್ವಭಾವಿ ಸಭೆ

0

ದ.ಕ. ಸಂಪಾಜೆ ಗ್ರಾಮದ ಗೂನಡ್ಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪೂರ್ವಭಾವಿ ಸಭೆಯನ್ನು ಗೂನಡ್ಕದ ಶ್ರೀ ಶಾರದಾ ಸಮುದಾಯಭವನದಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸತ್ಯಜಿತ್ ಪೇರಡ್ಕ ಅಧ್ಯಕ್ಷತೆ ವಹಿಸಿದ್ದರು. ಆ.16ರಂದು ವರಮಹಾಲಕ್ಷ್ಮಿ ಪೂಜೆ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಶ್ರೀಮತಿ ಶ್ವೇತಾ ವರದರಾಜ್ ಸಂಕೇಶ್, ರೇಖ ಚೋಡಿಪಣೆ, ಶ್ರೀಮತಿ ಶಿಲ್ಪ ಸ‌ನತ್, ಎಸ್.ಪಿ. ಪೃಥ್ವಿ ರಂಜನನ್ ಕಲ್ಲುಗದ್ದೆ, ಶ್ರೀಮತಿ ಮಮತ ರೋಹಿತ್ ಅಬೀರ, ಶ್ರೀಮತಿ ಸ್ವಾತಿ ಮೋಹನ್ ಪೇರಡ್ಕ, ವಸಂತಿ ಪೇರಡ್ಕ, ಶೃತಿ ಶಿಶಿರ್ ಕುಯಿಂತೋಡು, ಮೋಹಿನಿ ವಿಶ್ವನಾಥ ಪೇರಡ್ಕ ಸೇರಿದಂತೆ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.