ಕಲ್ಲುಗುಂಡಿ: ಚೌಕಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟದ ಲಾರಿ ಚರಂಡಿಗೆ

0

ಚಾಲಕನ ನಿಯಂತ್ರಣ ತಪ್ಪಿದ ಕೋಳಿ ಸಾಗಾಟದ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಜು.24ರಂದು ಸಂಭವಿಸಿದೆ.

ಮಡಿಕೇರಿಯಿಂದ ಮಂಗಳೂರಿನ ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಕಲ್ಲುಗುಂಡಿಯ ಚೌಕಿ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದ್ದು, ಚಾಲಕ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.