ಕನಕಮಜಲು: ರಾಷ್ಟ್ರೀಯ ಹೆದ್ದಾರಿ ಬದಿಯ ಅಪಾಯಕಾರಿ ಮರಗಳ ತೆರವು ಕಾರ್ಯ
ಗ್ರಾ.ಪಂ. ಅರಣ್ಯ ಮತ್ತು ಮೆಸ್ಕಾಂ ಇಲಾಖೆಯೊಂದಿಗೆ ಗ್ರಾಮಸ್ಥರ ಸಹಕಾರ
ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕನಕಮಜಲು ಗ್ರಾಮದ ಪಂಜಿಗುಂಡಿ ಬಳಿ ಇರುವ ಅಪಾಯಕಾರಿ ಮರಗಳನ್ನು ಕನಕಮಜಲು ಗ್ರಾಮ ಪಂಚಾಯತಿ, ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ತೆರವು ಕಾರ್ಯ ಮಾಡಲಾಗುತ್ತಿದ್ದು, ಸುದ್ದಿ ವರದಿಗೆ ಫಲಶ್ರುತಿ ದೊರೆತಿದೆ.
ಪಂಜಿಗುಂಡಿ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಕೆಲವೊಂದು ಅಪಾಯಕಾರಿ ಮರಗಳಿದ್ದು, ಇದರ ತೆರವಿಗೆ ಆದೇಶವಾಗಿದ್ದರೂ ಮರಗಳ ತೆರವು ಆಗದ ಕುರಿತಂತೆ ‘ಸುದ್ದಿ’ ವೆಬ್ ಸೈಟ್ ಮತ್ತು ಪತ್ರಿಕೆಯಲ್ಲಿ ಕಳೆದ ಒಂದು ವಾರದ ಹಿಂದೆ ವರದಿ ಪ್ರಸಾರಗೊಂಡಿತ್ತು.
ಇದೀಗ ಕನಕಮಜಲು ಗ್ರಾಮ ಪಂಚಾಯತಿ , ಮೆಸ್ಕಾಂ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಮರಗಳ ತೆರವು ಕಾರ್ಯ ನಡೆಯುತ್ತಿದೆ.