ಶ್ರೀರಾಂ ಪೇಟೆ ; ಲಾರಿಗೆ ಹಿಂದಿನಿಂದ ಗುದ್ದಿದ ಜೀಪು; ಜಖಂ

0

ಸುಳ್ಯದ ಶ್ರೀ ರಾಂ ಪೇಟೆಯಲ್ಲಿ ನಿಂತಿದ್ದ ಗೂಡ್ಸ್ ಲಾರಿಯೊಂದಕ್ಕೆ ಹಿಂದಿನಿಂದ ಜೀಪು ಡಿಕ್ಕಿ ಹೊಡೆದು ಜೀಪು ಜಖಂ ಗೊಂಡ ಘಟನೆ ಇಂದು ನಡೆದಿದೆ.


ಶ್ರೀರಾಂ ಪೇಟೆಯ ಭಜನಾ ಮಂದಿರದ ಬಳಿ ನಿಂತಿದ್ದ ಸಾಮಾಗ್ರಿ ಸಾಗಾಟದ ಲಾರಿಗೆ ಹಿಂದಿನಿಂದ ಬಂದ ಜೀಪು ಡಿಕ್ಕಿಯಾಯಿತು. ಪರಿಣಾಮವಾಗಿ ಜೀಪಿನ ಗ್ಲಾಸ್ ಒಡೆದು ಜಖಂ ಗೊಂಡಿತು. ಜೀಪಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಜೀಪು ಮಡಿಕೇರಿ ಕಡೆಯದೆಂದು ತಿಳಿದುಬಂದಿದೆ.