ಅಮರಮುಡ್ನೂರು ಪಂಚಾಯತ್ ಗ್ರಾಮ ಸಭೆ

0

ಅಮರಮುಡ್ನೂರು ಗ್ರಾಮ ಪಂಚಾಯತ್ ಇದರ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ರವರ ಅಧ್ಯಕ್ಷತೆಯಲ್ಲಿ
ಜು.24 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ನೊಡೆಲ್ ಅಧಿಕಾರಿಯಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರರ ರುಕ್ಕು ರವರು ಸಭೆಯ ಕಲಾಪವನ್ನು ನಿರ್ವಹಿಸಿದರು.
ಪಿ.ಡಿ.ಒ ದಯಾನಂದ ಪತ್ತುಕುಂಜ ಗ್ರಾಮ ಸಭೆಯ ವರದಿಯನ್ನು ಮಂಡಿಸಿದರು.


ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಸರಬರಾಜು ಮಾಡುವ ಬಗ್ಗೆ ಹಾಗೂ ಪಂಚಾಯತ್ ರಸ್ತೆಯ ದುರಸ್ತಿ ಮತ್ತು ಸಮರ್ಪಕ ಚರಂಡಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರ ಪರವಾಗಿ ರಾಧಾಕೃಷ್ಣ ಬೊಳ್ಳೂರು ಒತ್ತಾಯಿಸಿದರು.

ವಿದ್ಯುತ್ ಲೈನ್ ಮೇಲೆ ಬೀಳುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಅಪಾಯದ ಸ್ಥಿತಿಯಲ್ಲಿ ಇರುವ ಮನೆಗಳ ಪರಿಶೀಲನೆ ನಡೆಸಿ ದುರಸ್ತಿ ಪಡಿಸುವಲ್ಲಿ ವಾರ್ಡ್ ಸದಸ್ಯರು ಗಮನಹರಿಸಬೇಕು. ಪಂಚಾಯತ್ ಮತ್ತು ಕಂದಾಯ ಇಲಾಖೆಯವರು ಈ ಬಗ್ಗೆ ಮುತುವರ್ಜಿ ವಹಿಸುವಂತೆ ಆಗ್ರಹಿಸಿದರು. ಗ್ರಾಮದಲ್ಲಿ ಸ್ವಚ್ಚತಾ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ರಸ್ತೆಯ ಮೇಲೆ ನಿರಂತರವಾಗಿ ಮಳೆ ನೀರು ಹರಿಯುತ್ತಿದೆ ಸಮರ್ಪಕ ಚರಂಡಿ ನಿರ್ಮಿಸಬೇಕು ಎಂದು ಪದ್ಮನಾಭ ಬೊಳ್ಳೂರು ಪ್ರಸ್ತಾಪಿಸಿದರು.
ಕಾಂಕ್ರೀಟ್ ರಸ್ತೆಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಚರಂಡಿ ಮಾಡದೇ ಇರುವುದರಿಂದ ಮಳೆ ನೀರು ನಮ್ಮ ಮನೆಯ ಅಂಗಳಕ್ಕೆ ಹರಿದು ಬರುವುದರಿಂದ ಸಮಸ್ಯೆ ಎದುರಾಗಿದೆ ಎಂದು ಪೂವ ಅಜಿಲ ರವರು ದೂರಿಕೊಂಡರು.


ಮುಂದಿನ ಬೇಸಿಗೆಯಲ್ಲಿ ಗ್ರಾಮದ ಪ್ರತಿ ಮನೆಗೆ ನೀರು ಸಮರ್ಪಕವಾಗಿ ಪೂರೈಕೆ ಮಾಡುವ ಬಗ್ಗೆ ಕಾರ್ಯ ನಿರ್ವಹಿಸಲಾಗುವುದು. ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಶೌಚಾಲಯವನ್ನು ದುರ್ಬಳಕೆ ಮಾಡಿ ಹಾನಿ ಮಾಡಲಾಗುತ್ತಿದೆ.


ಈ ಬಗ್ಗೆಪೋಲಿಸ್ ಇಲಾಖೆಗೆ ದೂರು ನೀಡಲಾಗಿದೆ ಎಂದು ಪಿ.ಡಿ.ಒ ತಿಳಿಸಿದರು.

ವೇದಿಕೆಯಲ್ಲಿ ಪಂ.ಉಪಾಧ್ಯಕ್ಷೆ ಭುವನೇಶ್ವರಿ ಸಿ.ಎಸ್ ಪದವು, ಸದಸ್ಯರಾದ ಕೃಷ್ಣಪ್ರಸಾದ್ ಮಾಡಬಾಗಿಲು, ಜಯಪ್ರಕಾಶ್ ದೊಡ್ಡಿಹಿತ್ಲು, ಅಶೋಕ ಚೂಂತಾರು, ಹೂವಪ್ಪ ಗೌಡ ಅರ್ನೋಜಿ, ವೆಂಕಟ್ರಮಣ ಇಟ್ಟಿಗುಂಡಿ, ರಾಧಾಕೃಷ್ಣ ಕೊರತ್ಯಡ್ಕ, ಜನಾರ್ದನ ಪೈಲೂರು, ದಿವಾಕರ ಬಿ, ಪದ್ಮ ಪ್ರಿಯಾ ಮೇಲ್ತೋಟ, ಸೀತಾ ಹೆಚ್, ಶಶಿಕಲಾ, ದಿವ್ಯ ಮಡಪ್ಪಾಡಿ, ತೇಜಾವತಿ ಕುಂಟಿಕಾನ, ಮೀನಾಕ್ಷಿ ಚೂಂತಾರು ಉಪಸ್ಥಿತರಿದ್ದರು.