ಸುಳ್ಯ : ಗುರುಪೂರ್ಣಿಮಾ ಪ್ರಯುಕ್ತ ದಾಸ ಗಾನಸುಧೆ ಹಾಗೂ ಗುರುವಂದನೆ ಕಾರ್ಯಕ್ರಮ

0

ದೀಪಾಂಜಲಿ ಮಹಿಳಾ ಮಂಡಲ (ರಿ.) ಹಾಗೂ ದೀಪಾಂಜಲಿ ಮಹಿಳಾ ಭಜನಾ ಮಂಡಳಿ (ರಿ.) ಶಾಂತಿನಗರ ಸುಳ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಗುರು ಪೂರ್ಣಿಮಾ ಪ್ರಯುಕ್ತ ದಾಸ ಗಾನಸುಧೆ ಹಾಗೂ ಗುರುವಂದನೆ ಕಾರ್ಯಕ್ರಮವು ಇತ್ತೀಚೆಗೆ ಸುಳ್ಯ ಶ್ರೀರಾಮ ಭಜನಾ ಮಂದಿರದಲ್ಲಿ ಸಂಕೀರ್ತನಗಾರ ಹಾಗೂ ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ದಿನೇಶ್ ಮಡಪ್ಪಾಡಿ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀರಾಮ ಭಜನಾ ಮಂದಿರದ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಭಜನಾ ಮಂಡಳಿಯ ಕಾರ್ಯದರ್ಶಿ ಕುಸುಮಾ ಮೋಂಟಡ್ಕ, ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಬಿಂದು ಉಪಸಿತರಿದ್ದರು. ಗುರುಪೂರ್ಣಿಮೆಯ ಪರವಾಗಿ ಭಜನಾ ಮಂಡಳಿಯ 12 ಮಂದಿ ಸದಸ್ಯರು ಅಧ್ಯಾಪಕ ವೃಂದದವರನ್ನು ಭಜನಾ ಗುರುಗಳು ಸನ್ಮಾನಿಸಿದರು ಹಾಗೂ ಭಜನಾ ಗುರುಗಳನ್ನು ಭಜನಾ ಮಂಡಳಿಯವರು ಗುರುವಂದನೆ ನಡೆಸಿಕೊಟ್ಟರು. ಶಿಕ್ಷಕ ವೃಂದದ ಪರವಾಗಿ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ರಮಾ ವೈ. ಕೆ. ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಮಕೃಷ್ಣ ಕಾಟುಕುಕ್ಕೆಯವರು ಗುರು ಪೂರ್ಣಿಮೆಯ ಪ್ರಯುಕ್ತ ದಾಸ ಗಾನಸುಧೆ ನಡೆಸಿಕೊಟ್ಟರು. ಭಾಗವಹಿಸಿದ ಐದು ಭಜನಾ ಮಂಡಳಿಗಳಾದ ಕನಕದಾಸ ಮಕ್ಕಳ ಭಜನ ಮಂಡಳಿ ಕನಕಮಜಲು, ದೀಪಾಂಜಲಿ ಮಹಿಳಾ ಭಜನ ಮಂಡಳಿ ಶಾಂತಿನಗರ, ಶಿವಶಂಕರಿ ಮಹಿಳಾ ಭಜನಾ ಮಂಡಳಿ ತೊಡಿಕಾನ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಅಜಪಿಲ ಬೆಳ್ಳಾರೆ ಹಾಗೂ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಕೊಲ್ಲಮೊಗ್ರು ಇವರಿಂದ ಭಜನಾ ಸಂಕೀರ್ತನ ನೆರವೇರಿತು.


ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ ಮೋಂಟಡ್ಕ ಸ್ವಾಗತಿಸಿ, ಮಹಿಳಾ ಮಂಡಲದ ಅಧ್ಯಕ್ಷ ಶ್ರೀಮತಿ ಲಲಿತಾ ವಂದಿಸಿದರು. ಶ್ರೀಮತಿ ಹೇಮಲತಾ ಗಣೇಶ್ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.