ನಿವೃತ್ತ ಅಕ್ಷರ ದಾಸೋಹ ನೌಕರರಿಗೆ ಇಡುಗಂಟು ಜಾರಿ ಹೋರಾಟಕ್ಕೆ ಸಂಧ ಜಯ

0

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (CITU)ದ ನಿರಂತರ ಹೋರಾಟದ ಫಲ ಶ್ರುತಿ ನಿವೃತ್ತ ಬಿಸಿಯೂಟ ನೌಕಾರಿಗೆ ಇಡುಗಂಟು ಜಾರಿಗೆ ಸರಕಾರ ಅಧಿಸೂಚನೆ ಹೊರಡಿಸಿದ್ದು ಇದು ಅಕ್ಷರ ದಾಸೋಹ ನೌಕರರ ಹೋರಾಟಕ್ಕೆ ಸಂಧ ಜಯ ಎಂದು ಸುಳ್ಯ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷರು CITU ಇದರ ಪ್ರ. ಕಾರ್ಯದರ್ಶಿಯು ಆದ ಕೆ.ಪಿ.ರಾಬರ್ಟ್ ಡಿಸೋಜಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಸಿಯೂಟ ಯೋಜನೆ ಪ್ರಾರಂಭವಾದ ಬಳಿಕ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 11,500ಕ್ಕೂ ಹೆಚ್ಚಿನ ನೌಕರರನ್ನು ಕಳೆದ 2022 ರಿಂದ ನಿವೃತ್ತಿ ಹೆಸರಿನಲ್ಲಿ ಕೆಲಸದಿಂದ ಕೈ ಬಿಡಲಾಗಿದೆ. ಈ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಆದರೆ ಇಂದು ಅತ್ಯಂತ ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ಈ ನಿವೃತ್ತ ಹೊಂದಿದ ಮತ್ತು ನಿವೃತ್ತ ಹೊಂದುವ ಈ ನೌಕರರಿಗೆ ಈಗ ಇಡುಗಂಟು ನೀಡಲು ಸರಕಾರ ಮುಂದಾಗಿದೆ.

15 ವರ್ಷ ಹಾಗೂ ಅದನ್ನು ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯ ದಿಂದ ಬಿಡುಗಡೆಗೊಳಿಸುವ ಅಡುಗೆ ನೌಕರರಿಗೆ 40,000/ರೂ ಮತ್ತು 5 ವರ್ಷ ಮೇಲ್ಪಟ್ಟ ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ನೌಕರರಿಗೆ 50,000 ರೂ ಇಡುಗಂಟು ನೀಡಲು ಸರಕಾರ ಅಧಿಸೂಚನೆ ಹೊರಡಿಸಿದೆ ಮತ್ತು ಮುಂದಿನ ದಿನಗಳಲ್ಲಿ ವೇತನ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಒಪ್ಪಿಕೊಂಡಿದೆ ಸರಕಾರದ ಈ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ.