ಕೊಡಗು ಸಂಪಾಜೆ: ಮನೆಯ ಗೋಡೆ ಕುಸಿತ – ವ್ಯಾಪಕ ಹಾನಿ

0

ಸಂಪಾಜೆ ಗ್ರಾಮದ ಕೊಯನಾಡಿನ ಸುಲೈಕ ಎಂಬವರ ಮನೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಮನೆಗೆ ಸಂಪೂರ್ಣ ಹಾನಿ ಸಂಭವಿಸಿದ ಘಟನೆ ಜು.26ರಂದು ಸಂಭವಿಸಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿ ವೆಂಕಟೇಶ್, ನೋಡೆಲ್ ಅಧಿಕಾರಿ ಹೇಮಂತ್, ಇಂಜಿನಿಯರ್ ಅಶೋಕ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ, ಗ್ರಾ.ಪಂ. ಸದಸ್ಯ ಪಿ.ಎಲ್.ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆಯ ಗೋಡೆ ಕುಸಿದ ಪರಿಣಾಮ ವ್ಯಾಪಾಕ ಹಾನಿ ಸಂಭವಿಸಿ ವಾಸಿಸಲು ಅಸಾಧ್ಯವಾಗಿರುವ ಕಾರಣ ಸುಲೈಖಾ ಅವರನ್ನು ಅವರ ಮಗಳ ಮನೆಗೆ ಕಳುಹಿಸಲಾಗಿರುವುದಾಗಿ ತಿಳಿದುಬಂದಿದೆ.