ದ.ಕ. ಸಂಪಾಜೆ ಗ್ರಾಮದ ಗೂನಡ್ಕ ಮಹಮ್ಮದ್ ಅವರ ಪುತ್ರ ಕಲಂದರ್ ಅವರು ಅಸೌಖ್ಯದಿಂದಾಗಿ ಜು.28ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು.
ಕಲಂದರ್ ಅವರಿಗೆ ಸಕ್ಕರೆ ಕಾಯಿಲೆ ಮತ್ತು ಅಸ್ತಮಾ ಕಾಯಿಲೆಯಿದ್ದು, ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರೆಂದು ತಿಳಿದುಬಂದಿದೆ.
ಕಲಂದರ್ ಅವರು ಗೂನಡ್ಕದಲ್ಲಿ ಈ ಮೊದಲು ಕ್ಯಾಂಟೀನ್ ನಡೆಸುತ್ತಿದ್ದರು.
ಮೃತರು ತಾಯಿ ಫಾತಿಮಾ, ಪತ್ನಿ , ಎರಡು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಮತ್ತು ಸಹೋದರು, ಸಹೋದರಿಯರನ್ನು ಅಗಲಿದ್ದಾರೆ.