ಕಲ್ಲುಗುಂಡಿ: ದಂಡಕಜೆಯಲ್ಲಿ ಮನೆಯ ಹಿಂಬದಿಯಲ್ಲಿ ಗೋಡೆ ಕುಸಿತ

0

ಕೂದಲೆಳೆ ಅಂತರದಿಂದ ಪಾರಾದ ಮನೆಯವರು

ಮನೆಯವರು ಊಟಕ್ಕೆ ಕುಳಿತುಕೊಳ್ಳಲು ಹೋದಾಗ ಸಂಭವಿಸಿದ ಘಟನೆ

ಸಂಪೂರ್ಣ ಹಾನಿಯಾದ ಅಡುಗೆ ಕೋಣೆ

ಭಾರೀ ಮಳೆಗೆ ಮನೆಯ ಹಿಂಬದಿಯ ಗೋಡೆ ಕುಸಿತಗೊಂಡು ಮನೆಯವರು ಕೂದಲೆಳೆಯ ಅಂತರದಲ್ಲಿ ಭಾರೀ ಅಪಾಯದಿಂದ ಪಾರಾಗಿದ್ದು, ಅಡುಗೆ ಕೋಣೆಗೆ ಸಂಪೂರ್ಣ ಹಾನಿಯಾದ ಘಟನೆ ದ.ಕ. ಸಂಪಾಜೆ ಗ್ರಾಮದ ದಂಡಕಜೆಯಲ್ಲಿ ಜು.29ರಂದು ರಾತ್ರಿ ಸಂಭವಿಸಿದೆ.

ಕಲ್ಲುಗುಂಡಿ ದಂಡಕಜೆಯ ಮಧುಸೂದನ ಎಂಬವರ ಮನೆಯ ಹಿಂಬದಿಯಲ್ಲಿ ಗೋಡೆ ಕುಸಿತಗೊಂಡಿದ್ದು, ಅಡುಗೆ ಕೋಣೆಗೆ ಸಂಪೂರ್ಣ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಅಡುಗೆ ಕೋಣೆಯೊಳಗೆ ಮನೆಯ ಐದು ಜನರು ರಾತ್ರಿ ಊಟಕ್ಕೆ ಕುಳಿತುಕೊಳ್ಳಲು ಹೋದ ಸಂದರ್ಭದಲ್ಲಿ ಏಕಾಏಕಿಯಾಗಿ ಗೋಡೆ ಕುಸಿತಗೊಂಡಿದ್ದು, ಎಲ್ಲರೂ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.