ಮಡಪ್ಪಾಡಿ : ಕರಂಗಿಲಡ್ಕದಲ್ಲಿ ರಸ್ತೆಗೆ ಮರ – ಸಂಚಾರ ಕಡಿತ

0

ಮಡಪ್ಪಾಡಿಯ ಕರಂಗಿಲಡ್ಕ ಎಂಬಲ್ಲಿ ರಾತ್ರಿ 9:30ರ ಸಮಯದಲ್ಲಿ ಬಂದ ಗಾಳಿ ಮಳೆಗೆ ಮರ ಬಿದ್ದ ಘಟನೆ ವರದಿಯಾಗಿದೆ.

ಮರ ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರ ರಾತ್ರಿ ಸ್ಥಗತಗೊಂಡಿದೆ. ರಾತ್ರಿ ಸಮಯ ಆದ ಕಾರಣ ಮರ ತೆಗೆಯಲು ಅಸಾಧ್ಯವಾಗಿದ್ದು‌ ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ಸಿ ಎಫ್ ಎಸ್ ಗೆಳೆಯರ ಬಳಗದ ಸದಸ್ಯರು ವ್ಯವಸ್ಥೆ ಮಾಡಿದರು. ಉಳಿದಂತೆ ಬೆಳಿಗ್ಗೆ ತೆರವು ಕಾರ್ಯ ನಡೆಯಬೇಕಾಗಿದೆ.