ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್
ಚರಂಡಿ ಬ್ಲಾಕ್ ಆಗಿ ರಸ್ತೆಯಲ್ಲಿ ಹರಿಯುತ್ತಿರುವ ಮಳೆನೀರು
ನಿರಂತರವಾಗಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಬರೆ ಕುಸಿದು ಮಣ್ಣು ಚರಂಡಿಗೆ ಬಿದ್ದ ಪರಿಣಾಮವಾಗಿ ಚರಂಡಿ ಬ್ಲಾಕ್ ಆಗಿ ನೀರು ರಸ್ತೆಯಲ್ಲೇ ಹರಿಯುತ್ತಿರುವ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಜು.30ರಂದು ಸಂಭವಿಸಿದೆ.
ಸೋಣಂಗೇರಿ ಸರ್ಕಲ್ ಬಳಿ ಬರೆ ಜರಿಯುತ್ತಿರುವ ಹಿನ್ನೆಲೆಯಲ್ಲಿ ಚರಂಡಿಯ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಪಾಯದ ಪರಿಸ್ಥಿತಿಯಲ್ಲಿದೆ. ಸದ್ಯ ಬರೆಯಿಂದ ಮಣ್ಣು ಸ್ವಲ್ಪ ಸ್ವಲ್ಪವೇ ಕುಸಿದು ರಸ್ತೆಗೆ ಬೀಳುತ್ತಿದ್ದು, ಸಂಚಾರಕ್ಕೂ ತೊಡಕಾಗುವ ಸಂಭವ ಎದುರಾಗಿದೆ.