ಕಲ್ಚರ್ಪೆಯಲ್ಲಿ ಕೈಕೊಟ್ಟ ಕಸ ಬರ್ನಿಂಗ್ ಮೆಷಿನ್ – ಮತ್ತೆ ರಾಶಿ ಬೀಳುತ್ತಿರುವ ಕಸ

0

ಪಯಸ್ವಿನಿ ನದಿಗೆ ಹೋಗುತ್ತಿರುವ ತ್ಯಾಜ್ಯ

ಎರೆಹುಳ ಗೊಬ್ಬರದ ಟ್ಯಾಂಕ್ ಗಳಲ್ಲಿ ಸೊಳ್ಳೆ ಉತ್ಪಾದನೆ,ರೋಗ ಹರಡುವ ಆತಂಕ

ಕಲ್ಚರ್ಪೆಯಲ್ಲಿರುವ ಕಸ ಬರ್ನಿಂಗ್ ಮಾಡುವ ಮೆಷಿನ್ ಹಾಳಾದ ಕಾರಣ ಇದೀಗ ಎರೆಹುಳ ಗೊಬ್ಬರ ಉತ್ಪಾದನೆಗೆ ಮಾಡಿದ ಟ್ಯಾಂಕ್ ಗೆ ಕಸ ರಾಶಿ ಹಾಕಿ ಸೊಳ್ಳೆ ಉತ್ಪತ್ತಿಯಾಗುತ್ತಿರುವ ಘಟನೆ ಆಲೆಟ್ಟಿ ಗ್ರಾಮದ ಕಲ್ಚರ್ಪೆಯಿಂದ ವರದಿಯಾಗಿದೆ.

ಸುಳ್ಯದಿಂದ ಕಲ್ಚರ್ಪೆಗೆ ಬೇರ್ಪಡಿಸಿ ತಂದ ಕಸವನ್ನು ಇಲ್ಲಿ ಬರ್ನಿಗ್ ಮೆಷಿನ್ ಮೂಲಕ ಬರ್ನ್ ಮಾಡಲಾಗುತ್ತಿತ್ತು.

ಆದರೆ ಕೆಲವು ದಿನಗಳಿಂದ ಬರ್ನಿಂಗ್ ಮೆಷಿನ್ ಹಾಳಾದ ಕಾರಣ ಬೇರ್ಪಡಿಸಿ ತಂದ ಕಸವನ್ನು ಹಿಂದೆ ಗೊಬ್ಬರ ತಯಾರು ಮಾಡುವ ಟ್ಯಾಂಕ್ ಗೆ ತುಂಬಿಸಲಾಗುತ್ತಿದೆ. ಅಲ್ಲದೆ ಇಲ್ಲಿಯ ತೋಡಿನ ಬದಿ ತಂದು ಹಾಕಲಾಗುತ್ತಿದ್ದ ಕಸ ಮಳೆ ನೀರಿನಲ್ಲಿ ಕೊಚ್ಚಿ ಪಯಶ್ವಿನಿ ನದಿಗೆ ಸೇರುತ್ತಿದೆ.

ಅಲ್ಲಿರುವ ಕಟ್ಟಡದ ಶೀಟ್ ಗಳು ಕೂಡ ತುಂಡಾಗಿ ಬಿದ್ದಿರುವ ಕಾರಣ ಮಳೆ ನೀರು ಟ್ಯಾಂಕ್ ನಲ್ಲಿ ಸೇರಿ ಟ್ಯಾಂಕ್ ಗಳಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದರಿಂದಾಗಿ ಆಸುಪಾಸಿನವರಿಗೆ ಆರೋಗ್ಯ ಭಯ ಕಾಡಾಲಾರಂಭಿಸಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ನ.ಪಂ. ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕಿದೆ.