ಆ.3ರಂದು ಸುಳ್ಯ ವಕೀಲರ ಸಂಘದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

0

1 ಸ್ಥಾನಕ್ಕೆ‌ ಮೂವರು ಕಣದಲ್ಲಿ

ಸುಳ್ಯ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಆ.3ರಂದು‌ ಚುನಾವಣೆ ನಡೆಯಲಿದ್ದು, ಉಪಾಧ್ಯಕ್ಷ ಸ್ಥಾನ ಹೊರತು ಪಡಿಸಿ, ಅಧ್ಯಕ್ಷ ಸೇರಿದಂತೆ ಉಳಿದೆಲ್ಲ ಸ್ಥಾನಕ್ಕೆ ಒಬ್ಬೊಬ್ಬರೇ ಅಭ್ಯರ್ಥಿ ಗಳ‌ ನಾಮಪತ್ರಗಳು ಇರುವುದರಿಂದ ಅವರೆಲ್ಲರೂ ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಆದರೆ ಉಪಾಧ್ಯಕ್ಷರ 1 ಸ್ಥಾನಕ್ಕೆ ಮೂರು ಮಂದಿ‌ ವಕೀಲರು ನಾಮಪತ್ರ ಸಲ್ಲಿಸಿರುವುದರಿಂದ ಆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ಉಪಾಧ್ಯಕ್ಷತೆಗೆ ಮೂವರು

ಈ ಬಾರಿ ಉಪಾಧ್ಯಕ್ಷತೆಗೆ ವಕೀಲರುಗಳಾದ ದಿಲೀಪ್ ಬಾಬ್ಲುಬೆಟ್ಟು, ಪುಷ್ಪರಾಜ್ ಗಾಂಬೀರ್, ಸುಬ್ರಹ್ಮಣ್ಯ ಭಟ್, ಚರಣ್ ರಾಜ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ದಿನವಾದ ಜು.29ರಂದು ಚರಣ್ ರಾಜ್ ನಾಮಪತ್ರ ಹಿಂಪಡೆದಿರುವುದರಿಂದ, ದಿಲೀಪ್ ಬಾಬ್ಲುಬೆಟ್ಟು, ಪುಷ್ಪರಾಜ ಗಾಂಭೀರ, ಸುಬ್ರಹ್ಮಣ್ಯ ಭಟ್ ಅಂತಿಮ ಕಣದಲ್ಲಿ ಉಳಿದರು.

ಅಧ್ಯಕ್ಷತೆಗೆ ಹಿರಿಯ ವಕೀಲರಾದ ಸುಕುಮಾರ್ ಕೋಡ್ತುಗುಳಿ ಹಾಗೂ ಭಾಸ್ಕರ್ ರಾವ್ ನಾಮಪತ್ರ ಸಲ್ಲಿಸಿದ್ದರು. ಭಾಸ್ಕರ್ ರಾವ್ ನಾಮಪತ್ರ ಹಿಂಪಡೆದಿದ್ದು, ಸುಕುಮಾರ್ ಕೋಡ್ತುಗುಳಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವುದು ಖಚಿತ. ಆದರೆ ಘೋಷಣೆ ಬಾಕಿಯಿದೆ. ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉಳಿದ ಎಲ್ಲ ಪದಾಧಿಕಾರಿಗಳ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಅವರೆಲ್ಲ ಅವಿರೋಧ ಆಯ್ಕೆಯಾಗಲಿದ್ದಾರೆ.

ಆ.3ರಂದು ಉಪಾಧ್ಯಕ್ಷತೆ ಚುನಾವಣೆ ನಡೆದು ಮತ ಎಣಿಕೆಯ ನಂತರ ಎಲ್ಲ ಪದಾಧಿಕಾರಿಗಳ ಆಯ್ಕೆಯ ಕುರಿತು ಘೋಷಣೆ ನಡೆಯಲಿದೆ ಎಂದು ತಿಳಿದುಬಂದಿದೆ.