ಸುಳ್ಯದ ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಎರಡು ದಿನಗಳಿಂದ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.
ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆಯ ಕೊರತೆಯಿಂದ ಸೊರಗುತ್ತಿರುವ ಕುರಿತು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಜು. 25ರಂದು ಸುಳ್ಯಕ್ಕೆ ಬಂದಿದ್ದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ ರವರು ಪಾರ್ಕ್ ಗೆ ಭೇಟಿ ನೀಡಿ, ಪಾರ್ಕ್ ಅವ್ಯವಸ್ಥೆ ನೋಡಿ ಸ್ವಚ್ಚತೆ ಕಾಪಾಡುವಂತೆ ಹಾಗೂ ಪಾರ್ಕ್ ನಿರ್ವಹಣೆಗೆ ಕ್ರಿಯಾ ಯೋಜನೆ ತಯಾರಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಎ.ಸಿ. ಯವರ ಸೂಚನೆಯಂತೆ ಪಾರ್ಕ್ ನತ್ತ ನಗರ ಪಂಚಾಯತ್ ಗಮನಹರಿಸಿದೆ. ಜು.31 ಮತ್ತು ಆ.1ರಂದು ಪಾರ್ಕ್ ನಲ್ಲಿ ಸ್ವಚ್ಚತಾ ಕಾರ್ಯ ನಡೆಯುತ್ತಿದೆ. ಪಾರ್ಕ್ ನಲ್ಲಿ ತುಂಬಿದ್ದ ಕಾಡು ಗಿಡಗಳನ್ನು ಕಡಿದು ಸ್ವಚ್ಚತೆ ಕಾಪಾಡಲಾಗಿದೆ. ಕಸಗಳನ್ನು ಹೆಕ್ಕಲಾಗಿದೆ.
ಈ ವೇಳೆ ಹಲವು ಮದ್ಯದ ಬಾಟಲಿಗಳು ದೊರೆತಿರುವುದಾಗಿ ತಿಳಿದುಬಂದಿದೆ.
ನಗರ ಪಂಚಾಯತ್ ಈಗಾಗಲೇ ಪಾರ್ಕ್ ಸಂದರ್ಶನದ ಸಮಯ ನಿಗದಿಪಡಿಸಿ ನಾಮಫಲಕ ಅಳವಡಿಸಿದ್ದು, ಸಿಸಿ ಕ್ಯಾಮರಾ ಅಳವಡಿಸಬೇಕಾಗಿದೆ.