ಸೋಣಂಗೇರಿ ಮುಖ್ಯ ರಸ್ತೆ ಬದಿ ಬರೆ ಕುಸಿದು ಮಣ್ಣು ರಸ್ತೆ ಹಾಗೂ ಚರಂಡಿಗೆ ಬಿದ್ದಿದ್ದು ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
ಮಣ್ಣು ಚರಂಡಿಗೆ ಬಿದ್ದ ಪರಿಣಾಮ ಚರಂಡಿ ಬಂದ್ ಆಗಿ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಬರೆಯ ಬದಿಯಲ್ಲಿ ಮರಗಳು,ವಿದ್ಯುತ್ ಕಂಬಗಳು ಕೂಡ ಇರುವುದರಿಂದ ಬರೆ ಇನ್ನಷ್ಟು ಜರಿದು ಬಿದ್ದರೆ ಅಪಾಯದ ಸಂಭವವಿದೆ.