ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಸಿ.ಸಿ.ಬೇಬಿ ನಿವೃತ್ತಿ

0

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಸಿ.ಸಿ.ಬೇಬಿಯವರು ಜು.31 ರಂದು ಸೇವಾ ನಿವೃತ್ತಿಗೊಂಡಿದ್ದಾರೆ.
ಇವರು ಆರೋಗ್ಯ ಇಲಾಖೆಯಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು.
1986 -87 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ ಮಡಿಕೇರಿ ಇಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ತರಬೇತಿ ಹೊಂದಿದ ಬಳಿಕ ಸರಕಾರದ ಆದೇಶದಂತೆ 1988 ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆಯ ಬಾಳಿಲ ಉಪಕೇಂದ್ರಕ್ಕೆ ಕಿರಿಯ ಮಹಿಳಾ ಅಸರೋಗ್ಯ ಸಹಾಯಕಿಯಾಗಿ ಸರಕಾರಿ ಸೇವೆಗೆ ಸೇರಿದರು.
18 ವರ್ಷ 9 ತಿಂಗಳು ಗಳವರೆಗೆ ಬಾಳಿಲ ಉಪಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಬಾಳಿಲ ಉಪಕೇಂದ್ರವು ಪ್ರಾ.ಆ.ಕೇಂದ್ರವು ಪಂಜಕ್ಕೆ ವಿಲೋನಗೊಂಡ ಸಂದರ್ಭದಲ್ಲಿ 31-03-2007 ರಿಂದ 04-08-2017 ರವರೆಗೆ 10 ವರ್ಷ ,4 ತಿಂಗಳು 3 ದಿನಗಳ ಕಾಲ ಪಂಜ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು.

ಬಳಿಕ 1-03-2012 ರಿಂದ 31-08-2012 ವರೆಗೆ ವೆನ್ಲಾಕ್ ಜಿಲ್ಲಾ ತರಬೇತಿ ಕೇಂದ್ರ ಮಂಗಳೂರು ಇಲ್ಲಿ 6 ತಿಂಗಳು ಹಿರಿಯ ಆರೋಗ್ಯ ಸುರಕ್ಷಾಧಿಕಾರಿಯಾಗಿ ತರಬೇತಿ ಪಡೆದರು.
ನಂತರ ಹಿರಿಯ ಆರೋಗ್ಯ ಸುರಕ್ಷಾಧಿಕಾರಿಯಾಗಿ ಪದೋನ್ನತಿಗೊಂಡು 10-02-2021 ರಿಂದ ಬೆಳ್ಳಾರೆ ಪ್ರಾ.ಆ.ಕೇಂದ್ರಕ್ಕೆ ಕರ್ತವ್ಯಕ್ಕೆ ಹಾಜರಾಗಿ 3 ವರ್ಷ,5 ತಿಂಗಳು 21 ದಿನಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.
ಇವರು ಮೂಲತ: ಕೊಡಗು ಜಿಲ್ಲೆ ಸೋಮವಾರ ಪೇಟೆಯವರಾಗಿದ್ದು ಸಹೋದ್ಯೋಗಿಯಾಗಿದ್ದ ಆರೋಗ್ಯ ನಿರೀಕ್ಷಣಾಧಿಕಾರಿ ರಾಜೇಂದ್ರ ಪ್ರಸಾದ್ ರವರನ್ನು ವಿವಾಹವಾಗಿದ್ದಾರೆ.
ಪ್ರಸ್ತುತ ಬಾಳಿಲದ ಅಕ್ಷಯ ನಿಲಯದಲ್ಲಿ ನೆಲೆಸಿದ್ದಾರೆ.
ಇವರಿಗೆ ಇಬ್ಬರು ಮಕ್ಕಳಿದ್ದು ಪುತ್ರಿ ಅರ್ಪಿತ ಕೆ.ಆರ್.ಬಿ.ಬಿ.ಎಮ್ ಶಿಕ್ಷಣ ಪಡೆದು ಬಿನು ಕೆ.ಯವರೊಂದಿಗೆ ವಿವಾಹವಾಗಿದ್ದಾರೆ.ಇವರಿಗೆ 7 ವರ್ಷ ಪ್ರಾಯದ ರಿಷಾಲ್ ಕೆ.ಪುತ್ರನಿದ್ದಾನೆ.
ಪುತ್ರ ಅಕ್ಷಯ್ ಕೆ.ಆರ್.ಬಿ.ಕಾಂ.ಶಿಕ್ಷಣ ಪಡೆದು ಅಶ್ವಿನಿಯವರೊಂದಿಗೆ ವಿವಾಹವಾಗಿ ಇಬ್ಬರು ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.