ಕನಕಮಜಲು: ಕೋಡಿಯಲ್ಲಿ ಭಾರೀ ಮಳೆಗೆ ಬರೆ ಜರಿತ

0

ಮುಂಜಾಗ್ರತಾ ಕ್ರಮವಾಗಿ ಮನೆಯವರನ್ನು ಸ್ಥಳಾಂತರಿಸಿದ ಗ್ರಾ.ಪಂ.

ಕನಕಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿ ಶ್ರೀಮತಿ ಮಹೇಶ್ವರಿ ಅವರ ಮನೆಯ ಬಳಿ ಬರೆ ಜರಿದು ಬಿದ್ದಿದ್ದು, ಮುಂಜಾಗ್ರತಾ ಕ್ರಮವಾಗಿ ಮನೆಯವರನ್ನು ಗ್ರಾ.ಪಂ. ವತಿಯಿಂದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಸ್ಥಳಕ್ಕೆ ಕನಕಮಜಲು ಗ್ರಾಮ ಪಂಚಾಯಿತ್ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು ಆ.1ರಂದು ಭೇಟಿ ನೀಡಿ ಪರಶೀಲನೆ ನಡೆಸಿದರು.

ಸದ್ಯ ಮನೆಗೆ ಹಾಗೂ ಮನೆಯವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಮುಂಜಾಗೃತಾ ಕ್ರಮವಾಗಿ ಗ್ರಾ.ಪಂ. ವತಿಯಿಂದ ಮನೆಯವರನ್ನು ಸಂಭಂದಿಕರ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.