ಮುರುಳ್ಯ ಗ್ರಾಮದ ಪೂದೆ ಸಂಪರ್ಕಿಸುವ ರಸ್ತೆ ಕೆಸರುಗದ್ದೆಯಾಗಿ ಪರಿವರ್ತನೆಗೊಂಡು ಸಂಚಾರಕ್ಕೆ ತಡೆಯಾಗಿದ್ದು, ಗ್ರಾಮಸ್ಥರು ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ.
ಮುರುಳ್ಯ ಗ್ರಾಮ ಸಭೆಯಲ್ಲಿ ಪ್ರತೀ ಬಾರಿ ಈ ರಸ್ತೆಯ ದುರವಸ್ಥೆಯ ಬಗ್ಗೆ ಚರ್ಚೆಗಳಾಗುತ್ತಿದ್ದರೂ ರಸ್ತೆ ಅಭಿವೃದ್ಧಿಗೊಳ್ಳದೆ ಮಳೆಗಾಲದಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ರಸ್ತೆಯ ಈ ದುರವಸ್ಥೆಯನ್ನು ಮನಗಂಡು ಗ್ರಾಮಸ್ಥರು ಶ್ರಮದಾನದ ಮೂಲಕ ಅಲ್ಪ ಮಟ್ಟಿನ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಥವಾ ಸಂಬಂಧಿಸಿದ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶ್ರಮದಾನದಲ್ಲಿ ವಸಂತ ಪೂದೆ, ಪದ್ಮನಾಭ ಪೂದೆ, ಶಿವರಾಮ ಪೂದೆ, ಪದ್ಮನಾಭ ಪೂದೆ, ಜಯಂತ ಪೂದೆ, ಮಹೇಶ ಪೂದೆ, ಲಿಂಗಪ್ಪ ಪೂದೆ, ಆದರ್ಶ ಪೂದೆ ಗೋಪಾಲ ಭಟ್, ನಾರಾಯಣ ಪೂದೆ ಕಾರ್ತಿಕ ರೈ, ವಿಶ್ವನಾಥ ಪೂದೆ, ಸುನಿಲ್ ಕಾಪ್ತಡ್ಕ, ರಮೇಶ್ ಕಾಪುತ್ತಡ್ಕ, ಬಾಬು ನಾಯ್ಕ ಪೂದೆ ಭಾಗವಹಿಸಿದ್ದರು.