ಪಂಜ: ಗ್ಯಾರೇಜ್ ಮಾಲಕ ಸಾಬ್ಜಾನ್ ಸಾಹೇಬ್ ನೆಲ್ಲಿಕಟ್ಟೆ ನಿಧನ

0

ಪಂಜದ ನೆಲ್ಲಿಕಟ್ಟೆ ನಿವಾಸಿ ಸಾಬ್ಜಾನ್ ಸಾಹೇಬ್ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.2ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 58 ವರುಷ ವಯಸ್ಸಾಗಿತ್ತು. ಅನೇಕ ವರ್ಷಗಳಿಂದ ಆವರು ನೆಲ್ಲಿಕಟ್ಟೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದು ಪಂಜ ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಮೃತರು ಪುತ್ರ ಶಾರುಕ್, ಪತ್ನಿ, ಮೂವರು ಪುತ್ರಿಯರನ್ನು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಪಂಜದಲ್ಲಿ ವರ್ತಕರು ಸ್ವಲ್ಪ ಹೊತ್ತು ಅಂಗಡಿ ಮುಂಗಟ್ಟುಗಳನ್ನು ಮಚ್ಚಿ ಶೋಕಾಚರಣೆ ನಡೆಸಿದರು.