ಪಂಜ: ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ ರವರಿಗೆ ಬೀಳ್ಕೊಡುಗೆ ಸಮಾರಂಭ

0

ತೆರೆದ ವಾಹನದಲ್ಲಿ ಮೆರವಣಿಗೆ- ಅದ್ದೂರಿಯ ಸ್ವಾಗತ

ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ ರವರು ಜು.31 ರಂದು ಸೇವೆಯಿಂದ ನಿವೃತ್ತಿಯಾಗಿದ್ದು ಆ ಪ್ರಯುಕ್ತ ಇಂದು (ಆ.3) ಬೀಳ್ಕೊಡುಗೆ ಸಮಾರಂಭ ಅದ್ಧೂರಿಯಾಗಿ ಪಂಜ ಪದವಿ ಪೂರ್ವ ಕಾಲೇಜು ನಲ್ಲಿ ಜರುಗಲಿದೆ. ಮುಂಜಾನೆ ಪಂಜ ಪೇಟೆಯಿಂದ ಕಾಲೇಜುಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ ರವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಮೆರವಣಿಗೆಯಲ್ಲಿ ವಾಹನಗಳು, ಸಂಘಟಕರು, ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು
ಊರ-ಪರವೂರ ಜನ ಪಾಲ್ಗೊಂಡಿದ್ದರು.