ಸುಳ್ಯ ಗಾಂಧಿನಗರ ಮತ್ತು ಪೊಲೀಸ್ ಠಾಣೆ ಬಳಿ ರಸ್ತೆಯ ಮಧ್ಯದಲ್ಲಿ ಮರಣಗುಂಡಿ…!

0

ಪ್ರಯಾಣಿಕರೇ.. ಎಚ್ಚರ ತಪ್ಪಿದರೆ ನಿಮ್ಮ ವಾಹನ ಗ್ಯಾರೇಜ್‌ಗೆ – ನೀವೂ ಆಸ್ಪತ್ರೆಗೆ

ಸುಳ್ಯ ಮುಖ್ಯರಸ್ತೆಯಲ್ಲಿ ಪೋಲಿಸ್ ಠಾಣೆ ಬಳಿ ಹಾಗೂ ಗಾಂಧಿನಗರ ಅಲೆಟ್ಟಿ ರಸ್ತೆ ತಿರುವಿನ ಬಳಿ ಮಳೆಗಾಲಕ್ಕೆ ಮೊದಲೇ ಇದ್ದ ಗುಂಡಿ ಈಗ ವಿಪರೀತ ಮಳೆಯಿಂದ ದೊಡ್ಡದಾಗಿದ್ದು ವಾಹನ ಸವಾರರಿಗೆ ವಾಹನ ಚಲಾಯಿಸುವುದೇ ದೊಡ್ಡ ಸವಾಲಾಗಿದೆ.

ಪೋಲೀಸ್ ಠಾಣೆಯ ಬಳಿ ರಸ್ತೆಯ ಎರಡು ಕಡೆ ದೊಡ್ಡ ಗುಂಡಿಯಾಗಿದೆ. ಮೂರು ರಸ್ತೆ ಸಂಪರ್ಕವಾಗುವ ಸ್ಥಳ ಇದಾಗಿದ್ದು ದಿನಂಪ್ರತಿ ನೂರಾರು ವಾಹನ ಓಡಾಡುತ್ತವೆ. ಸ್ವಲ್ಪ ಕಣ್ಣು ಆಚೆಈಚೆಯಾದರೆ ಎದುರಿನ ವಾಹನಕ್ಕೆ ಇನ್ನೊಂದು ವಾಹನ ಬಂದು ಗುದ್ದುವುದು ಗ್ಯಾರಂಟಿ. ಗುಂಡಿ ತಪ್ಪಿಸಿದರೆ ಅಪಘಾತವಾಗುವುದು ಗ್ಯಾರಂಟಿ.
ರಾತ್ರಿ ವೇಳೆಯಲ್ಲಿ ಅನೇಕ ವಾಹನಗಳು ಗುಂಡಿಗೆ ಬಿದ್ದು ತಮ್ಮ ದುಡಿಮೆಯ ದುಡ್ಡು ಗ್ಯಾರೇಜ್ ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಒಟ್ಟಿನಲ್ಲಿ ಈ ರಸ್ತೆ ಗತಿ ಹೀಗೆ ಇದೆ. ಯಾರಲ್ಲಿ ಹೇಳಿದರೆ ಸರಿಯಾಗಬಹುದು ಈ ಸಮಸ್ಯೆ ಗೆ ಪರಿಹಾರ ಸಿಗಬಹುದು ಅಂತ ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಜನಪ್ರತಿನಿಧಿಗಳು ಅಧಿಕಾರಿಗಳು ದಿನಂಪ್ರತಿ ಇದೇ ರಸ್ತೆಯಲ್ಲಿ ಒಡಾಡುತ್ತಿದ್ದಾರೆ ಅದರೂ ಪರಿಹಾರ ಕಂಡುಕೊಳ್ಳುವ ಯೋಚನೆ ಬರುವುದಿಲ್ಲ ಸಮಸ್ಯೆಗೆ ಪರಿಹಾರ ಯಾವಾಗ ಸಿಗಬಹುದು?.

ಯಾರಾದರೂ ಪಂಚಾಯತ್ ಗೆ ಹೇಳಿದರೆ ನಾಲ್ಕು ಚೀಲ ಕ್ರಶರ್ ಜಲ್ಲಿ ಹುಡಿ ತಂದು ಹಾಕುತ್ತಾರೆ ಅದು ಎರಡು ದಿನ ಮಳೆ ಬರುವಾಗ ಮತ್ತೆ ಅದೇ ಗುಂಡಿಯಾಗುತ್ತದೆ. ಒಟ್ಟಿನಲ್ಲಿ ಈ ರಸ್ತೆ ಗೆ ಯಾರು ಜವಾಬ್ದಾರಿ ಎಂದು ಉತ್ತರವೇ ಇಲ್ಲದಂತಾಗಿದೆ.

ಪ್ರತೀ ವರ್ಷ ಸುಳ್ಯ ನಗರದ ಕೆಲವು ಈ ಭಾಗಗಳಲ್ಲಿ ಮಳೆಗಾಲದಲ್ಲಿ ಗುಂಡಿ ನಿರ್ಮಾಣವಾಗುತ್ತದೆ. ಅದಕ್ಕೆ ತೇಪೆ ಹಾಕ್ತರೆ ಮತ್ತೆ ಗುಂಡಿ ಆಗುತ್ತದೆ ಮತ್ತೆ ತೇಪೆ ಹಾಕ್ತರೆ ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ.
ಒಟ್ಟಿನಲ್ಲಿ ರಸ್ತೆಯಲ್ಲಿ ಅಪಘಾತವಾಗಿ ಪ್ರಾಣ ಹಾನಿ ಆಗುವುವರೆಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ.