ಲೆಫ್ಟಿನಂಟ್ ಕರ್ನಲ್ ಕಾರ್ತಿಕ್ ಕಣಕ್ಕೂರ್ ಸೇವಾ ನಿವೃತ್ತಿ

0

ಭಾರತೀಯ ಸೇನೆಯಲ್ಲಿ 14 ವರ್ಷಗಳ ಸೇವೆಯನ್ನು ಪೂರೈಸಿದ ಲೆಫ್ಟಿನಂಟ್ ಕರ್ನಲ್ ಡಾ. ಕಾರ್ತಿಕ್ ಕಣಕ್ಕೂರ್ ರವರು ಇದೇ ಜುಲೈನಲ್ಲಿ ಸೇವಾ ನಿವೃತ್ತಿ ಹೊಂದಿರುತ್ತಾರೆ.

ಭಾರತೀಯ ಸೇನೆಗೆ ಕ್ಯಾಪ್ಟನ್ ಆಗಿ ೨೦೧೦ ಜುಲೈನಲ್ಲಿ ಸೇರ್ಪಡೆ ಗೊಂಡ ಇವರು ಪಣಜಿ, ಲಕ್ನೊ, ಲಡಾಕಿನ ಸಿಯಾಚಿನ್, ಕಾಶ್ಮೀರದ ಉರಿ, ಅಕ್ನೂರ್, ಉತ್ತರ ಪ್ರದೇಶದ ಬರೇಲಿ, ಮಹಾರಾಷ್ಟ್ರದ ಔರಂಗಾಬಾದ್, ರಾಜಸ್ಥಾನದ ಶ್ರೀಗಂಗಾನಗರ ಮೊದಲಾದೆಡೆ ಮೇಜರ್ ರೇoಕ್ನಲ್ಲಿ ಸೇವೆಗೈದು, ತದನಂತರ ಲೆಫ್ಟಿನಂಟ್ ಕರ್ನಲ್ ಆಗಿ ಪದೋನ್ನತಿ ಹೊಂದಿ, ಪುಣೆಯ ಸಶಸ್ತ್ರ ಸೇನಾ ಚಿಕಿತ್ಸಾ ಮಹಾವಿದ್ಯಾಲಯದಲ್ಲಿ (AFMC) ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿರುತ್ತಾರೆ. 

ಮಂಗಳೂರಿನ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯಿಂದ ಎಂ.ಬಿ.ಬಿ.ಎಸ್, ಪುಣೆಯ ಸಶಸ್ತ್ರ ಸೇನಾ ಚಿಕಿತ್ಸಾ ಮಹಾವಿದ್ಯಾಲಯದಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಎಂ.ಡಿ ಪದವಿ ಪಡೆದ ಡಾ. ಕಾರ್ತಿಕ್ ಕಣಕ್ಕೂರ್ ರವರು, ಯುನಿವರ್ಸಿಟಿ ಆಫ್ ಸೌತ್ ವೇಲ್ಸ್ ನಿಂದ ಜಿನೋಮಿಕ್ ಮೆಡಿಸಿನ್ ನಲ್ಲಿ ಪಿಜಿ ಡಿಪ್ಲೊಮ ಪೂರೈಸಿ ಪ್ರಸ್ತುತ ಮೈಸೂರಿನ ಪ್ರತಿಷ್ಠಿತ ಜೆ.ಯಸ್.ಯಸ್ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಆಯ್ಕೆ ಆಗಿರುತ್ತಾರೆ.