ಚರ್ಚ್ ಧರ್ಮ ಕೇಂದ್ರದ ವೆಬ್ಸೈಟ್ ಗೆ ಚಾಲನೆ,ಹಾಗೂ ಸ್ಕಾಲರ್ ಶಿಪ್ ವಿತರಣೆ
ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಅ.4 ರಂದು ಸಂತ ಲಾರೆನ್ಸ್ ವಾಳೆಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ಪ್ರಾರ್ಥನಾ ವಿಧಿಯ ಬಳಿಕ ಚರ್ಚ್ ಧರ್ಮ ಗುರುಗಳಾದ ರೇ,ಫಾ.ವಿಕ್ಟರ್ ಡಿಸೋಜ ರವರು ಸಂತ ಲಾರೆನ್ಸ್ ರೇ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂಭ್ರಮದ ಬಲಿ ಪೂಜೆಯನ್ನು ಅರ್ಪಿಸಲಾಯಿತು.
ಬಳಿಕ ಧರ್ಮ ಗುರುಗಳು ಮಾತನಾಡಿ ಸ್ಪೇನ್ ದೇಶದಲ್ಲಿ ಜನಿಸಿ ರೋಮ್ ನಗರಕ್ಕೆ ಬಂದು ದೀಕ್ಷಕರಾಗಿ ಜನರ ಸೇವೆ ಮಾಡಿದವರು ಸಂತಲಾರೆನ್ಸರು.
ಅವರು ನಡೆದುಬಂದ ದಾರಿ, ಅವರು ತಮ್ಮ ಜೀವನವನ್ನೇ ಬಡವರಿಗಾಗಿ ಮುಡುಪಾಗಿಟ್ಟ ಒಬ್ಬ ಅಪ್ಪಟ ಸಂತರಾಗಿದ್ದು, ಬಡವರ, ಶಾಲಾ ಮಕ್ಕಳ, ಅಡುಗೆಯವರ,ಮತ್ತು ಹಾಸ್ಯಗಾರರ ಅವರು ಪಾಲಕರಾಗಿದ್ದರು.
ಅವರ ಧೈರ್ಯ,ಶ್ರದ್ಧೆ ಹಾಗೂ ತೀವ್ರ ಕಷ್ಟಗಳನ್ನು ಎದುರಿಸುವಲ್ಲಿ ಅವರು ನಮಗೆ ಮಾದರಿಯಾಗಿದ್ದಾರೆ ಎಂದು ಹಿತವಚನ ಮಾಡಿದರು.
ಬಲಿ ಪೂಜೆಯ ಬಳಿಕ ಧರ್ಮ ಕೇಂದ್ರದ ವೆಬ್ ಸೈಟಿಗೆ ಚಾಲನೆ ನೀಡಲಾಯಿತು.
ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ಧರ್ಮ ಕೇಂದ್ರದ ವತಿಯಿಂದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಹಬ್ಬದ ಆಚರಣೆ ಪ್ರಯುಕ್ತ ಉಪಾಧ್ಯಕ್ಷರಾದ ನವೀನ್ ಮಚಾದೊ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ಥ ಉಪಸ್ಥಿತರಿದ್ದು ಧರ್ಮ ಗುರುಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು.
ಕಾರ್ಯಕ್ರಮದ ಬಳಿಕ ಮೆಸ್ ಹಾಲ್ ನಲ್ಲಿ ಲಾರೆನ್ಸ್ ವಾಳೆಯ ಸದಸ್ಯರ ವತಿಯಿಂದ ಭಕ್ತಾದಿಗಳಿಗೆ ಕಾಫಿ -ತಿಂಡಿ ಹಂಚಲಾಯಿತು.