ಶಿರಾಡಿ ಘಾಟ್ ರಾಷ್ಟೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ, ಭ್ರಷ್ಟಾಚಾರ ನಡೆದಿದೆ: ಕಿಶೋರ್ ಶಿರಾಡಿ

0

ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ದೊಡ್ಡ ತಪ್ಪಲಿನಲ್ಲಿ ಗುಡ್ಡೆ ಭೂಕುಸಿತದಿಂದ ಅಪಾರ ಪ್ರಮಾಣದ ಮಣ್ಣು ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿ ಇಡೀ ಸಂಚಾರ ಮಾರ್ಗ ವನ್ನು ಆಗಾಗ ಬಂದ್ ಮಾಡಲಾಗುತ್ತಿದೆ. ಇದರಿಂದಾಗಿ ಕರಾವಳಿ ಬಂದರು ನಗರಿ ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ಹೋಗಬೇಕಾದಂತ ಘನ ಹಾಗೂ ದ್ರವ ವಸ್ತುಗಳು ಹಾಗೂ ಅಲ್ಲಿಂದ ಮಂಗಳೂರಿಗೆ ಬರಬೇಕಾದ ಸಾಮಗ್ರಿಗಳು ಸಂಚಾರ ಮಾರ್ಗ ಬಂದ್ ಮಾಡಿರುವುದರಿಂದ ತೀರಾ ಸಂಕಷ್ಟಗಳಬೇಕಾಗಿದೆ. ಈ ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿ ಚತುಷ್ಪತ ರಸ್ತೆ ಕಾಮಗಾರಿಗಾಗಿ 15 ವರ್ಷ ಕಳೆದರೂ ಕಾಮಗಾರಿ ಇನ್ನೂ ಕೂಡ ನಿಧಾನಗತಿಯಲ್ಲಿ ಸಾಗುತ್ತಾ ಬಂದಿದೆ. ಅಲ್ಲದೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಕೂಡ ಆಗಿರುತ್ತದೆ ಎಂದು ಮಲೆನಾಡು ಹಿತ ರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ ಹೇಳಿದರು. ಅವರು ಜು. 2ರಂದು ದೊಡ್ಡ ತಪ್ಪಲು ಕಾಮಗಾರಿ ನಡೆಯುವ ಸ್ಥಳವನ್ನು ವೀಕ್ಷಿಸಿ, ಪತ್ರಕರ್ತರೊಂದಿಗೆ ಮಾತನಾಡಿದರು.

ಶಿರಾಡಿ ಘಾಟ್ ರಸ್ತೆಯನ್ನು ವಿಶೇಷವಾಗಿ ಅಧ್ಯಯನ ಮಾಡದೇಯೇ ಕಾಮಗಾರಿಗಳನ್ನ ಮಾಡಿ ಈ ರೀತಿಯ ಸಮಸ್ಯೆ ಉಂಟಾಗಿದೆ. ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ಸ್ ಗಳು ವೈಜ್ಞಾನಿಕವಾಗಿ ಅಧ್ಯಯನ ಮಾಡುದರೊಂದಿಗೆ DPR ತಯಾರು ಮಾಡಬೇಕಿತ್ತು. ಆಗಾಗ ಭೂಕುಸಿತ ಉಂಟಾಗುವ ಗುಡ್ಡದ ಬಲ ಹಾಗೂ ಎಡಬದಿಯಲ್ಲಿ ತಡೆಗೋಡೆ ಇಲ್ಲ. ಗುಡ್ಡದ ಮೇಲೆ ಇರುವ ದೊಡ್ಡ ಕೆರೆ ಇಂದ ನೀರು ತುಂಬಿ ಅದು ಜಿನುಗುತ್ತ ಗುಡ್ಡದ ಮಣ್ಣನ್ನು ಮಾರ್ಗಕ್ಕೆ ತಂದು ಹಾಕಿರುವಂಥದ್ದು ವಿಪರ್ಯಾಸ. ರಾಷ್ಟ್ರೀಯ ಹೆದ್ದಾರಿ ಬಂದ್ ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯವಹಾರ ಕೂಡ ಕುಂಠಿತವಾಗಿರುತ್ತದೆ .ಉದ್ಯಮಿಗಳು ತೀರ ನಷ್ಟ ಕೊಳಪಡುವ ಸಂದರ್ಭವಾಗಿದೆ. ಇನ್ನೊಂದು ಕಡೆಯಲ್ಲಿ ಸರಕಾರಿ ಬಸ್ಸುಗಳಿಗೆ ಅಥವಾ ಖಾಸಗಿ ಬಸ್ಸುಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಅನುಮತಿ ಕೂಡ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಆಹಾರ ಪದಾರ್ಥಗಳು ಸಾಮಾಗ್ರಿಗಳು ಹಾಸನ ಅಥವಾ ಬೆಂಗಳೂರು ಕಡೆಯಿಂದ ಬರಬೇಕಾದರೆ ಇದೊಂದೇ ಮಾರ್ಗ. ಈಗಾಗಲೇ ಆಗುಂಬೆ ಘಾಟ್ ಬಂದ್ ಆಗಿರುವುದರಿಂದ ಎಲ್ಲಿಯೂ ಸಂಚರಿಸಲು ಕಷ್ಟಕರವಾಗಿರುತ್ತದೆ.


ಆದುದರಿಂದ ಜಿಲ್ಲಾ ಆಡಳಿತವು ಕೂಡ ಎಚ್ಚೆತ್ತುಕೊಂಡು ಬಸ್ಸುಗಳಿಗೆ ಸಂಚಾರ ಮಾಡಲು ಅನುವು ಮಾಡಬೇಕು ಹಾಗೂ ಮಾರ್ಗದ ಎರಡು ಬದಿಗಳಲ್ಲಿ ಮಣ್ಣು ಕುಸಿತಿರುವ ಜಾಗಗಳಲ್ಲಿ ಬೇಸಿಗೆಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಶಿರಾಡಿ ಒತ್ತಾಯಿಸಿದ್ದಾರೆ . ಅವರೊಂದಿಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಉಪಾಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಸದಸ್ಯರಾದ ಯತೀಶ್ ಗುಂಡ್ಯ ಜೊತೆಗಿದ್ದರು