ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ ವಿಧಿವಶ

0

ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ ಆ.5 ರಂದು ಅಲ್ಪ ಕಾಲದ ಅಸೌಖ್ಯದಿಂದ ಅವರ ಪಂಜದ ಕಮಿಲ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 45 ವರುಷ ವಯಸ್ಸಾಗಿತ್ತು.ಅವರು ಕರ್ನಾಟಕ , ಧರ್ಮಸ್ಥಳ, ಬಪ್ಪನಾಡು, ಕದ್ರಿ, ಗೆಜ್ಜೆ ಗಿರಿ, ಬಾಚೆಕೆರೆ, ಪುತ್ತೂರು, ಕುಂಟಾರು ಮೇಳದಲ್ಲಿ ಅವರು ಸ್ತ್ರೀ ವೇಷ ಮತ್ತು ಪುಂಡು ವೇಷಾಧಾರಿಯಾಗಿ ಅನೇಕ ವರ್ಷಗಳಿಂದ
ಸೇವೆ ಸಲ್ಲಿಸಿ ಖ್ಯಾತಿಯಾಗಿದ್ದರು. ಅನೇಕ ಸನ್ಮಾನ ಪಡೆದಿದ್ದರು.


ಮೃತರು ತಾಯಿ ಶ್ರೀಮತಿ ಜಾನಕಿ, ಪತ್ನಿ ಶ್ರೀಮತಿ ಶಶಿಕಲಾ, ಪುತ್ರ ಮಿಥುನ್, ಪುತ್ರಿಯರಾದ ಶ್ರೀಮತಿ ರಕ್ಷಾ, ದೀಕ್ಷಾ, ಅಳಿಯ , ಮೊಮ್ಮಗ,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.