ಆಗಸ್ಟ್ 3 ರಂದು ಸುಳ್ಯದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ನಡೆಯಿತು.
ಸಮಾರಂಭದ ಸಭಾಧ್ಯಕ್ಷತೆಯನ್ನು ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜ ವಹಿಸಿ ಮಾತನಾಡುತ್ತಾ, ಮಕ್ಕಳನ್ನು ಈಗಿನಿಂದಲೇ ಪರೀಕ್ಷೆಗಳಿಗೆ ಯಾವ ರೀತಿ ತಯಾರಿ ಗೊಳಿಸಬೇಕು, ದೈನಂದಿನ ಚಟುವಟಿಕೆ, ಶಿಸ್ತು, ಗೌರವ ತಾಳ್ಮೆ ಈ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಉತ್ತೇಜಿಸಬೇಕು ಎಂದರು.ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ, ಪ್ರೌಢಶಾಲಾ ಪೋಷಕರ ಸಮಿತಿಯ ಸದಸ್ಯರಾದ ವಿಜಯ್ ಕುಮಾರ್ ಹಾಗೂ ದಿನೇಶ್ವರಿ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಸವಿತಾ ರವರು ಈ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳು, ಮತ್ತು ಹೆತ್ತವರಿಗೆ ಅಗತ್ಯವಿರುವ ಸಲಹೆ ಸೂಚನೆಗಳ ಬಗ್ಗೆ ತಿಳಿಸಿದರು. ಸಹ ಶಿಕ್ಷಕಿ ರೀಟಲತಾ ಡಿ’ಸಿಲ್ವ ಸ್ವಾಗತಿಸಿದರು.