ಆಲೆಟ್ಟಿ: ಪಂಚಾಯತ್ ವತಿಯಿಂದ ಆಡಿಂಜದ ಮೋರಿಯ ಹೂಳನ್ನೆತ್ತಿ ದುರಸ್ತಿ ಕಾರ್ಯ

0

ಬಡ್ಡಡ್ಕ ಕೂರ್ನಡ್ಕ ರಸ್ತೆ ಮಧ್ಯೆ ಆಡಿಂಜದಲ್ಲಿರುವ ಮೋರಿಯಲ್ಲಿ ಹೂಳು ತುಂಬಿದ್ದು ನೀರು ರಸ್ತೆಯ ಮೇಲೆ ಹರಿದು ರಸ್ತೆ ಬದಿ ಕುಸಿತಗೊಂಡು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ಕಳೆದ ವಾರ ವರದಿ ಪ್ರಕಟಗೊಂಡಿತು.


ಈ ಬಗ್ಗೆ ಮುತುವರ್ಜಿ ವಹಿಸಿದ ಸ್ಥಳೀಯ ಪಂಚಾಯತ್ ಸದಸ್ಯರು ಜೆ ಸಿ ಬಿ ಬಳಸಿಕೊಂಡು ಮೋರಿಯಲ್ಲಿ ತುಂಬಿದ್ದ ಹೂಳನ್ನು ತೆರೆದು ದುರಸ್ತಿ ಪಡಿಸಿದರು.


ಪಕ್ಕದಲ್ಲಿದ್ದ ಮನೆಯ ಅಂಗಳದ ಬದಿ ಕುಸಿತಗೊಂಡು ರಸ್ತೆ ಮೇಲೆ ಕುಸಿತ ಗೊಂಡಿರುವ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.