ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ
ಶಾಲಾ ಮೈದಾನದಲ್ಲಿ ಹಲವು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದಾ ಪೂಜೆ ಆಚರಣೆ ಮಾಡಿಕೊಂಡು ಬರುವುದಕ್ಕೆ ಯಾವುದೇ ನಿರ್ಬಂಧ ಬೇಡ. ಅನುಮತಿ ಕೊಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ ನೀಡಿದ್ದಾರೆ.
ತಾಲೂಕು ಪಂಚಾಯತ್ ನಲ್ಲಿ ನಡೆದ ಪ್ರಾಕೃತಿಕ ವಿಕೋಪ ಸಭೆಯ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಯವರನ್ನು ಕರೆದು ಈ ಕುರಿತು ಸಮಾಲೋಚನೆ ನಡೆಸಿದರು.
ಶಾಲಾ ಮೈದಾನದಲ್ಲಿ ಹಲವು ವರ್ಷಗಳಿಂದ ಸ್ಥಳೀಯವಾಗಿ ಧಾರ್ಮಿಕ ಆಚರಣೆ ಮಾಡಿಕೊಂಡು ಬರುತಿದ್ದಾರೆ. ಅಲ್ಲಿ ಊರವರೇ ಸೇರುವುದು.ಅವರಿಗೆ ಅವಕಾಶ ನಿರಾಕರಣೆ ಸರಿಯಲ್ಲ. ಹೊಸತಾಗಿ ಆಚರಿಸುವುದಾದರೆ ನೋಡಿ. ಆದರೆ 25-30 ವರ್ಷದ ಆಚರಣೆ ನಿಲ್ಲೋದು ಬೇಡ. ಅದೆಲ್ಲವೂ ಮಕ್ಕಳಿಗೆ ಅಧ್ಯಯನದ ಭಾಗ ಎಂದು ಶಾಸಕರು ಹೇಳಿದರು.
“ನಮಗೆ ಸುತ್ತೋಲೆಗಳು ಬಂದಿದೆ. ಮತ್ತು ಈಗಾಗಲೇ ನಮಗೂ ಕರೆಗಳು ಬಂದಿದ್ದು ನಾವು ಮೇಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಇಂದು ತಮ್ಮ ಸೂಚನೆಯನ್ನು ನಾವು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಶಿಕ್ಷಣಾಧಿಕಾರಿಗಳು ತಿಳಿಸಿದರು.