ಮಾಜಿ ಮುಖ್ಯಮಂತ್ರಿ,ಮಾಜಿ ಸಂಸದ ಡಿ.ವಿ.ಸದಾನಂದ ಗೌಡರು ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವನ್ನು ಭೇಟಿಯಾಗಿದ್ದಾರೆ.
ಮೋದಿ ಆಹ್ವಾನದ ಮೇರೆಗೆ ಡಿ.ವಿ.ಯವರು ಭೇಟಿಯಾಗಿರುವುದಾಗಿ ತಿಳಿದುಬಂದಿದೆ.
ಎರಡು ಬಾರಿ ಮಹತ್ವದ ಜವಾಬ್ದಾರಿಯ ಮೂಲಕ ದೇಶ ಸೇವೆ ಮಾಡಲು ಅವಕಾಶ ಕೊಟ್ಟದಕ್ಕೆ ಕೃತಜ್ಞತೆ ಸಲ್ಲಿಸಿರುವ ಡಿ ವಿಯವರು ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ಭೇಟಿಗೆ ಅವಕಾಶ ಕೊಟ್ಟದಕ್ಕೆ ಕೃತಜ್ಞತೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.