ಮಳೆ ಇಲ್ಲದಿದ್ದರೂ ಹರಿದು ಬರುವ ಮಣ್ಣು ಮಿಶ್ರಿತ ನೀರು ಕಂಡು ಅಚ್ಚರಿ…
ಕೋಲ್ಚಾರಿನ ಮೇಲೆ ಕಣಕ್ಕೂರು ಗುಡ್ಡ ಪ್ರದೇಶದಿಂದ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಣ್ಣು ಮಿಶ್ರಿತ ಕಲುಷಿತ ಒರತೆ ನೀರಿನ ಹರಿವು ಕಾಣಿಸಿಕೊಂಡಿದೆ.
ಮಳೆಯ ಪ್ರಮಾಣ ಕಡಿಮೆಯಾದರೂ ಕಳಂಕಾಗಿರುವ ಒರತೆ ನೀರು ಹರಿದು ಬರುತ್ತಿದ್ದು ಭೂಮಿಯ ಅಡಿಯಿಂದ ಬರುವ ನೀರಿನ ಹಾಗೆ ಕಾಣುತ್ತಿದ್ದು ಜನರು ಆಶ್ಚರ್ಯಚಕಿತ ರಾಗಿದ್ದಾರೆ.