ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಘಟನೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದ ಸೇವೆಗೆ ದೊರೆತ ಲಡ್ಡಿನಲ್ಲಿ ರಬ್ಬರ್ ಬ್ಯಾಂಡ್ ದೊರೆತಿರುವುದಾಗಿ ವರದಿಯಾಗಿದೆ.
ಚೊಕ್ಕಾಡಿ ಬಳಿಯ ಪದವುನ ವ್ಯಕ್ತಿಯೊಬ್ಬರು ಆ.೯ ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿದ್ದು ಲಡ್ಡು ಪ್ರಸಾದ ಸೇವೆಯನ್ನು ಮಾಡಿಸಿದ್ದರು. ಇದಕ್ಕೆ ಪ್ರತಿಯಾಗಿ ದೊರೆತ ಲಡ್ಡನ್ನು ಮನೆಗೆ ಬಂದು ಹಂಚಿದಾಗ ಲಡ್ಡೊಂದರಲ್ಲಿ ರಬ್ಬರ್ ಬ್ಯಾಂಡ್ ಇರುವುದು ತಿಳಿಯಿತು. ಈ ಮಾಹಿತಿಯನ್ನು ಅವರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.