ಅರಂತೋಡು: ಪೆತ್ತಾಜೆ ಬಿಜೆಪಿ ಬೂತ್ ಸಮಿತಿ ಪದಾಧಿಕಾರಿಗಳ ಆಯ್ಕೆ

0

ಅರಂತೋಡು ಗ್ರಾಮದ ಪೆತ್ತಾಜೆ ಬಿಜೆಪಿ ಬೂತ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಆಲೆಟ್ಟಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ಅವರ ಉಪಸ್ಥಿತಿಯಲ್ಲಿ ಗ್ರಾ.ಪಂ. ಸದಸ್ಯ ಪೆತ್ತಾಜೆ ವೆಂಕಟರಮಣ ಅವರ ಮನೆಯಲ್ಲಿ ನಡೆಯಿತು.

ಬೂತ್ ಸಮಿತಿ ನೂತನ ಅಧ್ಯಕ್ಷರಾಗಿ ಗೋವರ್ಧನ ಬೊಳ್ಳೂರು, ಕಾರ್ಯದರ್ಶಿಯಾಗಿ ಭಾನುಪ್ರಕಾಶ್ ಮೂಡನಕಜೆ ಆಯ್ಕೆಯಾದರು.


ಮತಗಟ್ಟೆ ಏಜೆಂಟರಾಗಿ ಶರತ್ ಎ
ವಿ., ಬಿ.ಎಲ್.ಎ. 2 ಆಗಿ ಧನುರಾಜ್ ಊರುಪಂಜ, ಮಹಿಳಾ ಸದಸ್ಯರಾಗಿ ಎ.ಎನ್. ರಾಧಾ ಅಡ್ಯಡ್ಕ, ಎಸ್.ಸಿ. ಸದಸ್ಯರಾಗಿ ಪದ್ಮಯ್ಯ ಎ.ಜಿ. ಅಡ್ಯಡ್ಕ, ಎಸ್.ಟಿ. ಸದಸ್ಯರಾಗಿ ಶೇಷಪ್ಪ ನಾಯ್ಕ ಎ.ಎಂ. ಅಡ್ಯಡ್ಕ, ಓ.ಬಿ.ಸಿ. ಸದಸ್ಯರಾಗಿ ಅರ್ಜುನ ಕಲ್ಲಗದ್ದೆ, ನಾಗೇಶ್ ಶೆಟ್ಟಿ ಅಡ್ಯಡ್ಕ, ರಾಜಾರಾಮ್ ಕೆ.ಕೆ. ಕೋಡಿಪೆರಾಜೆ, ಶಶಿಕುಮಾರ್ ಅಡ್ಯಡ್ಕ, ಸುಕುಮಾರ ಸಿ.ಆರ್.ಸಿ. ಅಡ್ಯಡ್ಕ ಆಯ್ಕೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರುಗಳಾದ ಎಜೆ.ಸುಧಾಕರ, ಎ.ಜೆ. ಉಮಾಶಂಕರ ಉಪಸ್ಥಿತರಿದ್ದರು.