ಸುಬ್ರಹ್ಮಣ್ಯದಿಂದ ಕಾಣೆಯಾಗಿದ್ದ ವ್ಯಕ್ತಿಯಿಂದ ಗೂನಡ್ಕದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಕಲ್ಲು ತೂರಾಟ

0

ಮಾನಸಿಕ ಅಸ್ವಸ್ಥತೆಯ
ಹಿನ್ನಲೆಯಲ್ಲಿ ಬಸ್ ಹತ್ತಿಸಿ ಸುಳ್ಯಕ್ಕೆ ಕಳುಹಿಸಿದ ಪೊಲೀಸರು

ಸುಳ್ಯದಲ್ಲಿ ಮತ್ತೆ ಕಾಣೆಯಾಗಿದ್ದು,ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಕುಟುಂಬಸ್ಥರಿಂದ ಮನವಿ

ಮಾನಸಿಕ ಅಸ್ವಸ್ಥನಾದ ವ್ಯಕ್ತಿಯೋರ್ವ ಆ. 10 ರಂದು ಅರಂತೋಡು ಮುಖ್ಯ ಪೇಟೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದು ಸ್ಥಳೀಯರು ಆತನನ್ನು ಕಲ್ಲುಗುಂಡಿ ಪೊಲೀಸರಿಗೆ ಒಪ್ಪಿಸಿದ್ದರು.

ಆದರೆ ಆ ವ್ಯಕ್ತಿ ಕಳೆದ ಕೆಲವು ವಾರಗಳ ಮೊದಲು ಸುಬ್ರಹ್ಮಣ್ಯದಿಂದ ಕಾಣೆಯಾಗಿದ್ದವರು ಎಂದು ತಿಳಿದು ಬಂದಿದೆ.

ಈ ವ್ಯಕ್ತಿ ಕಾಣೆಯಾದ ದಿನ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತ್ತು.
ಬಳಿಕ ಆತನನ್ನು ಅವರ ಮನೆಯವರು ಬೇರೆ,ಬೇರೆ ಕಡೆಗಳಲ್ಲಿ ಹುಡುಕಾಟ ಮಾಡಿದ್ದು, ಬಳಿಕ ಮುಗೇರ ಸಂಘಟನೆಯ ವಾಟ್ಸಪ್ ಗ್ರೂಪಲ್ಲಿ ಈ ಬಗ್ಗೆ ಪೋಸ್ಟರ್ ಹಂಚಿಕ್ಕೊಂಡಿದ್ದರು.

ಈ ವಿಷಯ ಸುಳ್ಯದ ನಂದರಾಜ್ ಸಂಕೇಶ್ ರವರಿಗೆ ತಿಳಿದಿದ್ದು, ಇಂದು ಆರಂತೋಡಿನಲ್ಲಿ ನಡೆದ ಘಟನೆ ಸುದ್ದಿ ವರದಿಯಲ್ಲಿ ಬಂದಾಗ ಈತನ ಫೋಟೋ ನೋಡಿ ಕಾಣೆಯಾಗಿದ್ದ ವ್ಯಕ್ತಿ ಇವರೇ ಎಂದು ಆತನ ಮನೆಯವರಿಗೆ ದೂರವಾಣಿ ಮೂಲಕ ಕರೆ ಮಾಡಿ ದೃಢಪಡಿಸಿಕೊಂಡಿದ್ದಾರೆ.

ಆದರೆ ಕಲ್ಲುಗುಂಡಿ ಪೊಲೀಸರು ಆತನನ್ನು ಮಾನಸಿಕ ಆದ ಹಿನ್ನೆಲೆಯಲ್ಲಿ ಕೈಯಲ್ಲಿ ಹಣಕೊಟ್ಟು ಸುಳ್ಯಕ್ಕೆ ಬಸ್ಸು ಹತ್ತಿಸಿ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಮಾಹಿತಿ ತಿಳಿದ ನಂತರ ನಂದರಾಜ್ ಸಂಕೇಶ್ ರವರು ಕೂಡಲೆ ಸುಳ್ಯ ಬಸ್ಸು ನಿಲ್ದಾಣಕ್ಕೆ ಹೋಗಿ ಟಿ ಸಿ ಅವರಲ್ಲಿ ವಿಚಾರಿಸಿದ್ದಾರೆ. ಆದರೆ ಕೆಲವು ಹೊತ್ತು ಬಸ್ ಸ್ಟ್ಯಾಂಡಿನಲ್ಲಿ ಇದ್ದ ಅವರು ಅಲ್ಲಿಂದ ಮತ್ತೆ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಆದ್ದರಿಂದ ಸುಳ್ಯದಲ್ಲಿ ಆ ವ್ಯಕ್ತಿ ಯನ್ನು ಯಾರಾದರು ಕಂಡಿದ್ದಲ್ಲಿ ಕೂಡಲೇ ನಂದರಾಜ್ ಸಂಕೇಶ್ ರವರಿಗೆ ಮಾಹಿತಿ ನೀಡುವಂತೆ ಅವರು ವಿನಂತಿಸಿಕೊಂಡಿದ್ದಾರೆ.

ಇವರು ಮೂಲತ ಗೋಣಿಕೊಪ್ಪ ಮೂಲದ ರಘು ಎಂದು ತಿಳಿದು ಬಂದಿದೆ.