ಬೆಳ್ಳಾರೆ ನೆಟ್ಟಾರಿನ ಭವ್ಯ ಪೂಜಾರಿಯವರು ನಾಯಕಿಯಾಗಿ ಅಭಿನಯಿಸಿದ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ, ಸೆವೆಂಟಿ ಸೆವೆನ್ ಸ್ಟೂಡಿಯೋಸ್ ರಾಘವೇಂದ್ರ ಕುಡ್ವರವರ ನಿರ್ಮಾಣದ ದಸ್ಕತ್ ತುಳು ಚಲನಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚಿಗೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಈ ಚಿತ್ರದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ ಕಾರ್ಯನಿರ್ವಹಿದ್ದಾರೆ.
ಸಂತೋಷ್ ಆಚಾರ್ಯ ಗುಂಪಲಾಜೆಯವರ ಛಾಯಾಗ್ರಹಣದ ಈ ಚಿತ್ರವನ್ನು ಗಣೇಶ್ ನೀರ್ಚಾಲ್ ರವರು ಸಂಕಲನ ಮಾಡಿದ್ದಾರೆ.
ಸಮರ್ಥನ್ ಎಸ್ ರಾವ್ ರವರ ಸಂಗೀತವಿದೆ.
ಚಲನಚಿತ್ರವು ಬೋಧಿ ಪ್ರೋಡಕ್ಷನ್ಸ್ ಸಹಯೋಗದೊಂದಿಗೆ ಮೂಡಿಬಂದಿದೆ.
ತಂಡದಲ್ಲಿ ಸ್ಮಿತೇಶ್ ಬಾರ್ಯ,ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ , ಮನೋಜ್ ಆನಂದ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ.
ವರದಿ : ಉಮೇಶ್ ಮಣಿಕ್ಕಾರ