ಅರಂತೋಡಿನಲ್ಲಿ ಮೊಗೇರ ಯುವ ವೇದಿಕೆ ಪದಗ್ರಹಣ

0

ಆಟಿ ಸಂಭ್ರಮ – ವಿದ್ಯಾರ್ಥಿಗಳಿಗೆ ಅಭಿನಂದನೆ

ಮೊಗೇರ ಯುವ ವೇದಿಕೆ ವಲಯ ಸಮಿತಿ ಅರಂತೋಡು – ಸಂಪಾಜೆ ಇದರ ಪದಗ್ರಹಣ ಸಮಾರಂಭ ಹಾಗೂ ಆಟಿ ಸಂಭ್ರಮ, ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆ. 11 ರಂದು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಉದ್ಘಾಟಿಸಿದರು. ಯುವ ವೇದಿಕೆಯ ಅರಂತೋಡು ಸಂಪಾಜೆ ನೂತನ ವಲಯ ಸಮಿತಿಯ ಪದಗ್ರಹಣವನ್ನು ತಾಲೂಕು ಯುವ ವೇದಿಕೆಯ ಅಧ್ಯಕ್ಷ ಲಕ್ಷ್ಮಣ ಪಾರೆ ನೆರವೇರಿಸಿದರು.

ಹಂಪಿ ವಿಶ್ವ ವಿದ್ಯಾಲಯ ಕನ್ನಡ ಪ್ರಾಸಾರಂಗ ವಿಭಾಗ ನಿರ್ದೇಶಕರಾದ ಡಾ. ಮಾಧವ ಪೆರಾಜೆ ಪ್ರಧಾನ ಭಾಷಣ ಮಾಡಿದರು. ತಾಲೂಕು ಮೊಗೇರ ಸಮಿತಿ ಅಧ್ಯಕ್ಷ ಕರುಣಾಕರ ಪಲ್ಲತಡ್ಕ ಅಧ್ಯಕ್ಷತೆ ವಹಿಸಿದ್ದರು.

ಮೊಗೇರ ಸಮುದಾಯದ ಎಲ್ಲಾ ಕಾರ್ಯಕ್ರಮಗಳನ್ನು ಆರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ಉಚಿತವಾಗಿ ನಡೆಸಲು ಅವಕಾಶ ನೀಡುತ್ತಾ ಬಂದಿರುವ ಸಮುದಾಯ ಭವನದ ಮಾಲಕ ಟಿ. ಎಂ. ಶಹೀದ್ ರವರನ್ನು ವಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕ್ಯಾನ್ಸರ್ ತಜ್ಞರಾದ ಡಾ. ರಘು ಸನ್ಮಾನಿಸಿದರು. ಎಸ್. ಎಸ್. ಎಲ್. ಸಿ ಹಾಗೂ ಪಿಯುಸಿ ಯಲ್ಲಿ ಗರಿಷ್ಠ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯುವ ವೇದಿಕೆ ಸ್ಥಾಪಕಾಧ್ಯಕ್ಷ ಲೋಕೇಶ್ ಪಲ್ಲತಡ್ಕ ಹಾಗೂ ಮೊಗೇರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಬಂಗ್ಲೆಗುಡ್ಡೆ ಇವರನ್ನು ಗೌರವಿಸಲಾಯಿತು. ಬಡ ವಿದ್ಯಾರ್ಥಿನಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು.

ವೇದಿಕೆಯಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ, ಮೊಗೇರ ಸಂಘದ ಗೌರವಾಧ್ಯಕ್ಷ ಕೇಶವ ಮಾಸ್ತರ್ ಸುಳ್ಯ, ದೈವ ಆರಾಧಕ ಬಾಬು ಪಚ್ಲಂಪಾರೆ, ಮೊಗೇರ ಸಂಘದ ಕೊಡಗು ಜಿಲ್ಲಾಧ್ಯಕ್ಷ ರವಿ ಪಿ. ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಶಶಿಧರ ದೊಡ್ಡಕುಮೇರಿ, ಸರೋಜಿನಿ ಕಡೆಪಾಲ ಉಪಸ್ಥಿತರಿದ್ದರು.

ಕು. ಅನನ್ಯ ಅಡ್ಯಡ್ಕ ಹಾಗೂ ಬಿಂದ್ಯಾ ಕಡೆಪಾಲ ಪ್ರಾರ್ಥಿಸಿದರು. ಯುವ ವೇದಿಕೆ ವಲಯ ಸಮಿತಿ ಕೋಶಾಧಿಕಾರಿ ಚಿದಾನಂದ ಕಟ್ಟಕೋಡಿ ಸ್ವಾಗತಿಸಿದರು. ದೇವಪ್ಪ ಹೈದಂಗೂರು ಪ್ರಾಸ್ತಾವಿಕ ಮಾತನಾಡಿದರು. ಮಹೇಶ್ ಬಂಗ್ಲೆಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ವಲಯ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಅಡ್ಕಬಳೆ, ಉಪಾಧ್ಯಕ್ಷ ಹರ್ಷಿತ್ ದಂಡೆಕಜೆ, ಕಾರ್ಯದರ್ಶಿ ರಾಜೇಶ್ ಕಡಪಾಲ, ಸದಸ್ಯರಾದ ಚಂದ್ರಕುಮಾರ್ ಅಡ್ಯಡ್ಕ, ಮೋಹನ್ ಪ್ರಸಾದ್ ಅಡ್ಕಬಳೆ, ಯತೀಶ್ ಕಟ್ಟಕೋಡಿ, ಪುರುಷೋತ್ತಮ ಕಟ್ಟಕೋಡಿ, ಮಾಧವ ದಂಡೆಕಜೆ, ಬಾಲಕೃಷ್ಣ ಕಡೆಪಾಲ, ಹರಪ್ರಸಾದ್ ಕಡೆಪಾಲ, ಸತೀಶ್ ಕಡೆಪಾಲ, ಪ್ರಶಾಂತ್ ಬಂಗ್ಲೆಗುಡ್ಡೆ, ಪದ್ಮನಾಭ ಬಂಗೇರ, ಸುಧಾಕರ್ ಮೇನಾಲ ಮತ್ತಿತರರು ಸಹಕರಿಸಿದರು.
ಮಧ್ಯಾಹ್ನ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.