“ಆಟಿ ಕೂಟದ ಮಹತ್ವ – ಆಚರಣೆ ಪದ್ಧತಿಗಳು ಮುಂದಿನ ತಲೆಮಾರಿಗೂ ಪಸರಿಸಲಿ” : ಚಂದ್ರಾವತಿ ಬಡ್ಡಡ್ಕ
ಬಂಟರ ಯಾನೆ ನಾಡವರ ಸಂಘದ (ರಿ) ಸುಳ್ಯ ಮಹಿಳಾ ಘಟಕದ ಆಟಿಡೊಂಜಿ ದಿನ ಕಾರ್ಯಕ್ರಮವು ಆ. 11 ರಂದು ಬಂಟರ ಭವನ ಕೇರ್ಪಳದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಸುವರ್ಣ ರೈ ಕೊಂಕಣಿ ಮೂಲೆ ದೀಪ ಬೆಳಗಿಸಿ ಉದ್ಘಾಿಸಿದರು. ಬಳಿಕ ಮಾತನಾಡಿದ ಅವರು “ಇಂದಿನ ತಲೆಮಾರಿನವರಿಗೆ ಮತ್ತು ಹಿಂದಿನ ತಲೆಮಾರಿನವರ ಆಚರಣೆ, ನಡೆ , ತೊಡುಗೆ , ಶೈಲಿ ವಿಭಿನ್ನವಾಗಿದೆ. ಅಲ್ಲದೇ ಇಂದಿನ ಸಂಘಟನೆಗಳು ಆಟಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು , ಮುಂದಿನ ತಲೆಮಾರಿನವರಿಗೆ ಪಸರಿಸಲಿ ” ಎಂದು ಶುಭಹಾರೈಸಿದರು.
ಬಳಿಕ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಮಾತನಾಡಿ “ಆಟಿ ಉತ್ಸವಗಳು ಇಂದಿನ ಕಾಲದಲ್ಲಿಯೂ ನಡೆಯುತ್ತಿರುವುದು ತುಂಬಾ ಅಪರೂಪ, ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಂದರೆ ನಾಡಿನ ಜನತೆಗೆ ಸಂತೋಷದ ದಿನ. ಅದರಲ್ಲೂ ಆಟಿ ಕಳಂಜ ಮನೆ ಮನೆಗೆ ಬಂದು ಅದು ಊರಿನ ಜನರ ಜನರ ಆರೋಗ್ಯ ವನ್ನು ಮತ್ತು ನಾಡಿನ ಸಮೃದ್ಧಿ – ರಕ್ಷಣೆ ಮಾಡುವುದು ಎಂಬ ನಂಬಿಕೆ ಇತ್ತು. ಅದರಲ್ಲೂ ಆಟಿಯ ವಿವಿಧ ತಿನಿಸುಗಳು ಆಟಿ ಪಾಯಸ, ಕಣಿಲೆ, ಪತ್ರೊಡೆ, ಮೊದಲಾದ ಆಹಾರ ಆಹಾರ ಸೇವನೆ ನಮ್ಮ ದೇಹದ ರೋಗಗಳನ್ನು ದೂರ ಮಾಡಿ ಆರೋಗ್ಯ ರಕ್ಷಣೆಯನ್ನು ಕಾಪಾಡುವ ಔಷಧಿ ಗುಣವನ್ನು ಹೊoದಿದೆ. ಈ ಪದ್ಧತಿಯನ್ನು ನಾವು ಈಗಲೂ ಕೂಡಾ ಅನುಸರಿಸುತ್ತಾ ಬಂದಿದ್ದೇವೆ. ಆದ್ರೆ ಆಟಿ ಆಚರಣೆಯಲ್ಲಿ ವೈಜ್ಞಾನಿಕ ಮತ್ತು ಅವೈಜ್ಞಾನಿಕ ಹಿನ್ನಲೆ ಕೂಡಾ ಇದೆ. ಆಟಿ ಉತ್ಸವಗಳು ಇಂದಿನ ಕಾಲದಲ್ಲಿ ಅಳಿವಿನಂಚಿಗೆ ಹೋಗುತ್ತಿದೆ. ಆದ್ರೆ ಇಂದಿನ ಸಂಘಟನೆಗಳು, ಸಂಘ ಸಂಸ್ಥೆಗಳು ಆಟಿ ಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಿ ಕುಟುಂಬವನ್ನು ಒಗ್ಗೂಡಿಸುವ ಮತ್ತು ಮಹತ್ವ ಆಚರಣೆಯ ಬಗ್ಗೆ ಮುಂದಿನ ತಲೆಮಾರಿಗೂ ಪಸರಿಸುವ ಕಾರ್ಯಕ್ರಮದ ಅರಿವು ಮಾಡುವಂತ್ರಾಡುತ್ತಿದ್ದು ಮುಂದಿನ ತಲೆಮಾರಿನವರು ಮುಂದುವರಿಸಿ ಆಟಿ ಕಾರ್ಯಕ್ರಮಗಳು ನಡೆಯಲಿ ” ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಆರ್. ರೈ ವಹಿಸಿದರು.ಬಂಟರ ಯಾನೆ ನಾಡವರ ಸಂಘ ಸುಳ್ಯ ಅಧ್ಯಕ್ಷ ಮುಖ್ಯ ಅತಿಥಿಗಳಾಗಿ ಎನ್ . ಜಯಪ್ರಕಾಶ್ ರೈ ಆಟಿಯ ಉತ್ಸವ , ಹಿನ್ನಲೆ ಮತ್ತು. ಆಚರಣೆಯ ಬಗ್ಗೆ ಶುಭಹಾರೈಸಿದರು.
ಸಭೆಯಲ್ಲಿ ಗಣ್ಯರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಸಂಘದ ಕಾರ್ಯದರ್ಶಿ ಸುಭಾಷ್ ಚಂದ್ರ ರೈ, ಬಂಟರ ಯಾನೆ ನಾಡವರ ಸಂಘದ ಖಜಾಂಜಿ ಗಂಗಾಧರ ರೈ, ಮಹಿಳಾ ಘಟಕದ ಗೌರವಾಧ್ಯಕ್ಷೆ ಕಮಲಾಕ್ಷಿ ವಿ. ಶೆಟ್ಟಿ, ಕಾರ್ಯದರ್ಶಿ ಉಷಾಲತಾ, ಮಹಿಳಾ ಘಟಕದ ಖಜಾಂಜಿ ಶರ್ಮಿಳಾ ರೈ , ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಹಿರಿಯರಿಗೆ, ಕಿರಿಯರಿಗೆ ಮತ್ತುಮಕ್ಕಳಿಗೆ ವಿವಿಧ ಗ್ರಾಮೀಣ ಕ್ರೀಡಾ ಕೂಟ ಗಳಾದ , ಪುರುಷರಿಗೆ ಸೀರೆ ಉಡುವುದು, ಚೆನ್ನ ಮಣೆ, ತೆಂಗಿನ ಕಾಯಿ ಕುಟ್ಟುವುದು , ಲಿಂಬೆ ಚಮಚ ಓಟ, ಸಂಗೀತ ಕುರ್ಚಿ, ಲಕ್ಕಿ ಗೇಮ್ , ಜಾನಪದ ಗೀತೆ ಹಾಡುವುದು ವಿವಿಧ ಸ್ಪರ್ಧೆಗಳು ನಡೆಯಿತು.ಬಳಿಕ ಆಟಿ ಸ್ಪೇಶಲ್ ತಿಂಡಿ ತಿನಿಸುಗಳ ಉಪಹಾರಗಳು ವಿಶೇಷವಾಗಿತ್ತು.
ಸುಳ್ಯ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಆರ್ ರೈ ಸ್ವಾಗತಿಸಿ , ಸುಳ್ಯ ನಗರ ಮಹಿಳಾ ಘಟಕ ಅಧ್ಯಕ್ಷೆ ಉಮಾ ವಿ.ರೈ ವಂದಿಸಿ, ರೂಪಶ್ರೀ ಜಿ. ಕಾರ್ಯಕ್ರಮ ನಿರೂಪಿಸಿದರು.