ರಾಜ್ಯ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಗ್ರಂಥಾಲಯದ ಸುಳ್ಯ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಪುಸ್ತಕ ಪ್ರದರ್ಶನವನ್ನು ವಿಶ್ರಾಂತ ಪ್ರಾಂಶುಪಾಲ ವಿ.ಕೆ. ಭಟ್ ಉದ್ಘಾಟಿಸಿದರು. ಗ್ರಂಥಪಾಲಕಿ ವಾರಿಜ ಎ. ನೀರಬಿದಿರೆ, ಸಿಬ್ಬಂದಿ ಪ್ರಶಾಂತ್ ಇದ್ದರು.