ಗುರುಂಪುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಶಶಿಧರನ್ ಆಲೆಟ್ಟಿ ನಿಧನ

0

ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ ಶಶಿಧರನ್ ಆಲೆಟ್ಟಿ ಯವರು( 73) ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.

ಆ.10 ರಂದು ಬೆಳಗ್ಗೆ
ಆಲೆಟ್ಟಿಯಿಂದ ಸುಳ್ಯಕ್ಕೆ ತಮ್ಮ ಬೈಕಿನಲ್ಲಿ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಗಾಯಗೊಂಡ ಅವರನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ತಲೆಯ ಭಾಗಕ್ಕೆ ವಿಪರೀತ ಗಾಯಗೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ‌ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಶಶಿಧರನ್ ರವರು ಕಳೆದ ಹಲವಾರು ವರ್ಷಗಳಿಂದ ಆಲೆಟ್ಟಿಯಲ್ಲಿ ನೆಲೆಸಿದ್ದು‌ ಕಂಟ್ರಾಕ್ಟರ್ ಕೆಲಸ ಮಾಡಿಕೊಂಡು ಬರುತ್ತಿದ್ದರು.
ಸ್ಥಳೀಯವಾಗಿ ಅತ್ಯಂತ ಜನಾನುರಾಗಿಯಾಗಿದ್ದು ಕೊಡುಗೈ ದಾನಿಯಾಗಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಶ್ರೀಮತಿ ಮಾಲತಿ,ಓರ್ವ ಪುತ್ರ ರಾಜೇಶ್ ಆಲೆಟ್ಟಿ, ಪುತ್ರಿಯರಾದ ಶ್ರೀಮತಿ ರಜನಿ,ಶ್ರೀಮತಿ ರಾಜಶ್ರೀ,ಶ್ರೀಮತಿ ರಾಜಲಕ್ಷ್ಮಿ, ಕು. ರಜನಿ, ಸೊಸೆ ಶ್ರೀಮತಿ ಪ್ರಣಯಾ ಹಾಗೂಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.