ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಕೊಡಗು ಸಂಪಾಜೆ ಚೆಂಬು ಗ್ರಾಮದ ಡಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.SDMC ಅಧ್ಯಕ್ಷರಾದ ಭವಾನಿ ಕುಮಾರ ಕೊಪ್ಪಧ್ವಜಾರೋಹಣ ನೆರವೇರಿಸಿದರು.ಶಾಲಾ ಉಸ್ತುವಾರಿ ಸದಸ್ಯರಾದ ಗಿರೀಶ್ ಕುಮಾರ್ ಹೊಸೂರು ಸ್ವಾತಂತ್ರ್ಯೋತ್ಸವ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳು ದೇಶಭಕ್ತಿಗೀತೆ,ಭಾಷಣ ಇತ್ಯಾದಿಗಳನ್ನು ಪ್ರಸ್ತುತ ಪಡಿಸಿದರು. ಈ ವೇಳೆ ಶಿಕ್ಷಕ ವೃoದ, ವಿದ್ಯಾರ್ಥಿಗಳು, ಪೋಷಕರು, ಎಸ್ ಡಿ ಎಂ. ಸಿ ಸದಸ್ಯರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಸುಜಾತ ಬಿ .ಸರ್ವರನ್ನು ಸ್ವಾಗತಿಸಿ ,ಹಿರಿಯ ಶಿಕ್ಷಕಿ ಹಂಸಕಲಾ ವಂದಿಸಿದರು, ಬಳಿಕಸಿಹಿತಿಂಡಿ ವಿತರಣೆ ಮಾಡಲಾಯಿತು.