ಕೊಡಗು ಸಂಪಾಜೆ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯನಾಡು ವಿದ್ಯಾರ್ಥಿಗಳಿಂದ ಜೊತೆಗೂಡಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ

0

ಕೊಡಗು ಸಂಪಾಜೆ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯನಾಡು ವಿದ್ಯಾರ್ಥಿಗಳಿಂದ ಜೊತೆಗೂಡಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಪಾಜೆ ಮಾದರಿ ಪ್ರಾಥಮಿಕ ಶಾಲೆ SDMC ಅಧ್ಯಕ್ಷರಾದ ಶ್ರೀಧರ ಪಿ ಕೆ ರವರು ಧ್ವಜಾರೋಹಣವನ್ನು ನೆರವೇರಿಸಿದರು .ನಂತರ ವಿದ್ಯಾರ್ಥಿಗಳು ಪೋಷಕರು ಊರಿನವರು ಜೊತೆಗೂಡಿ ಸಂಪಾಜೆ ಶಾಲೆಯಿಂದ ಸಂಪಾಜೆ ಗೇಟ್ ನವರಿಗೂ ಅದ್ಧೂರಿಯ ಸ್ವಾತಂತ್ರ್ಯ ಘೋಷ ವಾಕ್ಯದೊಂದಿಗೆ ಮೆರವಣಿಗೆ ಸಾಗಿ ಬಂತು, ತದನಂತರ ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಸಂಪಾಜೆ ಶಾಲಾ SDMC ಅಧ್ಯಕ್ಷರಾದ ಶ್ರೀಧರ ಪಿ ಕೆ, ಕೊಯನಾಡು ಶಾಲಾ SDMC ಅಧ್ಯಕ್ಷರಾದ ಪುರುಷೋತ್ತಮ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಾದೇವಿ ಕಳಗಿ, ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಪಿ ಪಿ, ಕೊಯ್ನಾಡು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹನೀಫ್ ಎಸ್ ಪಿ, ಸಂಪಾಜೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಉದಯಕುಮಾರ್, ಸಂಪಾಜೆ ಶಾಲಾ ಮುಖ್ಯೋಪಾಧ್ಯಾಯರಾದ ಸಾವಿತ್ರಿ, ಕೊಯನಾಡು ಶಾಲಾ ಮುಖ್ಯೋಪಾಧ್ಯಾಯರಾದ ವನಿತಾ, ಹಾಗೂ ಇನ್ನಿತರ ಸದಸ್ಯರುಗಳು ಊರಿನವರು ಪೋಷಕರು ಸರ್ವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದರು ಯಶಸ್ವಿನೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.