ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆ ಹಬ್ಬ ಪ್ರಾರಂಭ

0

ವರ್ಷದಿಂದ ವರ್ಷ ವಿಜೃಂಭಿಸುವ ಸೀರೆ ಮೇಳ

ವಿಶಾಲವಾದ ಮಳಿಗೆಯಲ್ಲಿ ಸೀರೆಗಳನ್ನು ಖರೀದಿಸುತ್ತಿರುವ ಹೆಂಗಳೆಯರು

ಸುಳ್ಯದ ಜಟ್ಟಿಪಳ್ಳ ಮುಖ್ಯ ರಸ್ತೆಯಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ಆ.15 ರಿಂದ ಸೀರೆ ಮೇಳ ಪ್ರಾರಂಭಗೊಂಡಿದ್ದು ಆ.16 ರವರೆಗೆ ಸೀರೆ ಹಬ್ಬ ನಡೆಯಲಿದೆ.


ಪ್ರತೀ ವರ್ಷವೂ ನಡೆಯುವ ಸೀರೆ ಮೇಳದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗವಹಿಸುತ್ತಿದ್ದು ಈ ವರ್ಷವೂ ಸೀರೆ ಮೇಳ ವಿಜೃಂಭಿಸುತ್ತಿದೆ.
ವಿಶಾಲವಾದ ಮಳಿಗೆಯಲ್ಲಿ ಸೀರೆ ಖರೀದಿಗೆ ವ್ಯವಸ್ಥೆ ಮಾಡಲಾಗಿದ್ದು ಅತೀ ಕಡಿಮೆ ದರದಲ್ಲಿ ನೂತನ ವಿನ್ಯಾಸಗಳ ಹೊಸ ಹೊಸ ಸೀರೆಗಳು ಲಭ್ಯವಾಗಿದೆ.
ವಿವಿಧ ಕಂಪೆನಿಗಳ ಹೊಸ ವಿನ್ಯಾಸದ ಸೀರೆಗಳ ಅಪೂರ್ವ ಸಂಗ್ರಹವಿದ್ದು ಮಹಿಳೆಯರ ಆಯ್ಕೆಗೆ ತಕ್ಕಂತೆ ಸ್ಟಾಕ್ ಗಳು ಬಂದಿರುತ್ತದೆ.ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಈ ವರ್ಷವೂ ಎರಡು ದಿನ ಸೀರೆ ಮೇಳ ನಡೆಯುತ್ತಿದ್ದು ಅತೀ ಕಡಿಮೆ ಬೆಲೆಗೆ ಸೀರೆಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.