ಪಲ್ಲೋಡಿ ಉಳ್ಳಾಕುಲು ಕಲಾ ರಂಗದ ವತಿಯಿಂದ ಸ್ವಾತಂತ್ರ್ಯೋತ್ಸವ

0

ಪಂಜದ ಪಲ್ಲೋಡಿ ಉಳ್ಳಾಕುಲು ಕಲಾ ರಂಗದ ವತಿಯಿಂದ ಸ್ವಾತಂತ್ರ್ಯೋತ್ಸವ ನಡೆಯಿತು. ನಿವೃತ್ತ ಯೋಧ ಜನಾರ್ದನ ನಾಯ್ಕ್ ಪಲ್ಲೋಡಿ ಧ್ವಜಾರೋಹಣ ನೆರವೇರಿಸಿದರು. ಕಲಾರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ಅಧ್ಯಕ್ಷತೆ ವಹಿಸಿದ್ದರು. ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ್ ಪಲ್ಲೋಡಿ, ಕಾರ್ಯದರ್ಶಿ
ಸತೀಶ್ ಪಲ್ಲೋಡಿ , ನಿವೃತ್ತ ಯೋಧ ದಾಮೋದರ ಪಲ್ಲೋಡಿ,ನಿಕಟಪೂರ್ವ ಅಧ್ಯಕ್ಷ ಕವನ್ ಪಲ್ಲೋಡಿ, ಸದಸ್ಯರು , ಊರವರು ಉಪಸ್ಥಿತರಿದ್ದರು. ‌

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪಲ್ಲೋಡಿ ಸ್ವಾಗತಿಸಿದರು.
ಪ್ರಕಾಶ್ ಜಾಕೆ ನಿರೂಪಿಸಿದರು. ಧ್ವಜಾರೋಹಣ ನಿರೂಪಣೆ ಪ್ರಜ್ವಲ್ ಪಲ್ಲೋಡಿ ಮಾಡಿದರು. ಸತೀಶ್ ಪಲ್ಲೋಡಿ ವಂದಿಸಿದರು.