ಬಾಳಿಲದ ವಿದ್ಯಾ ಬೋಧಿನೀ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಜಂಟಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿದ್ಯಾಬೋಧಿನೀ ಸ್ಕೌಟ್ಸ್ ಗೈಡ್ಸ್ ಬ್ಯಾಂಡ್ ವಾದನದ ಮೂಲಕ ಅತಿಥಿ ಅಭ್ಯಾಗತರನ್ನು ಬರಮಾಡಿಕೊಳ್ಳಲಾಯಿತು
ಧ್ವಜಾರೋಹಣವನ್ನು
ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ) ಬಾಳಿಲ ಇದರ ಸಂಚಾಲಕರಾದ ಪಿ. ಜಿ. ಎಸ್. ಎನ್. ಪ್ರಸಾದ್ ನೆರವೇರಿಸಿ ಧ್ವಜ ಸಂದೇಶ ನೀಡಿದರು.
ಬಳಿಕ ಎಲ್ಲಾ ವಿದ್ಯಾರ್ಥಿಗಳು ಬಾಳಿಲದ ಮುಖ್ಯ ಪೇಟೆಯಲ್ಲಿ ಬ್ಯಾಂಡ್ ವಾದನದೊಂದಿಗೆ , ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಜಾಥ ಎಂಬ ಮೆರವಣಿಗೆಯಲ್ಲಿ ಪಾಲ್ಗೊಂಡರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಬೋಧಿನೀ ಎಜುಕೇಶನಲ್ ಸೊಸೈಟಿ (ರಿ ) ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ವಹಿಸಿದ್ದರು.
ಹೊನ್ನಪ್ಪ ಡಿ. ಕಲ್ಮಡ್ಕ , ನಿವೃತ್ತ ಯೋಧರು ಮುಖ್ಯ ಅಭ್ಯಾಗತರಾಗಿ ಆಗಮಿಸಿ ದೇಶ ಸೇವೆಯ ಅನುಭವಗಳನ್ನು ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಭಾಷಣ ಮತ್ತು ದೇಶಭಕ್ತಿಗೀತೆ ಕಾರ್ಯಕ್ರಮಗಳು ನಡೆದವು.
ಸ್ವಾತಂತ್ರೋತ್ಸವ ಪ್ರಯುಕ್ತ ನಡೆದ ಸಾಹಿತ್ಯಿಕ ಸ್ಪರ್ಧೆಗಳ
ಪ್ರಾಥಮಿಕ ವಿಭಾಗದ ವಿಜೇತರ ಪಟ್ಟಿಯನ್ನು ದೀಕ್ಷಿತ್. ಬಿ (7) , ಪ್ರೌಢ ವಿಭಾಗದ ವಿಜೇತರ ಪಟ್ಟಿಯನ್ನು ಆಸಿಯತ್ ಶಮ್ನಾ (9),
ಕ್ರೀಡಾ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಕ್ಷಮಾ, ಜಸ್ವಿತಾ ಕೆ, ಮನೀಶ್ ಜೆ. ಎನ್ , ಪ್ರೀತಂ ಬಿ. (10) ವಾಚಿಸಿದರು.
ವೇದಿಕೆಯಲ್ಲಿ ಪ್ರಾಥಮಿಕ ವಿಭಾಗದ
SDMC ಅಧ್ಯಕ್ಷರಾದ ರುಕ್ಮಯ್ಯ ನಾಯ್ಕ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಯಶೋಧರ ಎನ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ವಿದ್ಯಾರ್ಥಿನಿಯರಾದ ಜಶ್ಮಿ ಎನ್. ಸಿ (10) ಮತ್ತು ಚೈತನ್ಯ (10) ನಿರ್ವಹಿಸಿದ ಕಾರ್ಯಕ್ರಮವನ್ನು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಉದಯ ಕುಮಾರ್ ರೈ ಎಸ್ ವ೦ದಿಸಿದರು.
ಕೊನೆಯಲ್ಲಿ ಕಳಂಜ ಬಾಳಿಲ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಮತ್ತು ಹೊನ್ನಪ್ಪ ಡಿ ನಿವೃತ್ತ ಯೋಧರ ಪ್ರಾಯೋಜಕತ್ವದಲ್ಲಿ ನೀಡಿರುವ ಸಿಹಿತಿಂಡಿಯನ್ನು ವಿತರಿಸಲಾಯಿತು