ಕೀಲಾರುಮೂಲೆ ಮುಳುಗು ಸೇತುವೆ ಮುಳುಗಡೆ – ರಸ್ತೆ ಸಂಚಾರ ಸ್ಥಗಿತ
ಸಂಪಾಜೆ ಹಾಗೂ ಕೊಯನಾಡು ಪರಿಸರದಲ್ಲಿ ಆ.16ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ದ.ಕ. ಸಂಪಾಜೆ ಗ್ರಾಮದ ಕೀಲಾರುಮೂಲೆ ಮುಳುಗು ಸೇತುವೆ ನೀರಿನಲ್ಲಿ ಮುಳುಗಡೆಯಾಗಿದ್ದು, ಆ ಭಾಗದ ರಸ್ತೆ ಸಂಚಾರ ಕಡಿತಗೊಂಡಿರುವುದಾಗಿ ತಿಳಿದುಬಂದಿದೆ.
ದ.ಕ. ಸಂಪಾಜೆ ಗ್ರಾಮದ ಕೀಲಾರುಮೂಲೆ ಭಾಗದಲ್ಲಿ ಸುಮಾರು ಇಪ್ಪತ್ತೈದಕ್ಕೂ ಅಧಿಕ ಮನೆಗಳಿದ್ದು, ರಾತ್ರಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಳುಗು ಸೇತುವೆ ಮೇಲೆ ನೀರು ಬಂದ ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.