ಕೊಲ್ಲಮೊಗ್ರದಲ್ಲಿ ಭಾರೀ ಗಾಳಿ ಮಳೆ

0

ಕೊಲ್ಲಮೊಗ್ರದಲ್ಲಿ ಆ.16 ಸಂಜೆ ಭಾರೀ ಗಾಳಿ ಮಳೆ ಬಂದಿದ್ದು, ಕೊಲ್ಲಮೊಗ್ರ ಮುಖ್ಯರಸ್ತೆಯನ್ನು ದಾಟಿ ಹೋಗುವ ಹೊಳೆಯಲ್ಲಿ ನೀರು ತುಂಬಿ ಹರಿಯತೊಡಗಿದೆ.

ಕೊಲ್ಲಮೊಗ್ರ ಅಶ್ವತ್ಥ ಮರದ ಬಳಿ ಸೇತುವೆಯ ಮೇಲಿನಿಂದ ನೀರು ಧುಮ್ಮಿಕ್ಕಿ ಹರಿದಿದೆ.
ಜಾಲುಮನೆ, ಕೊಳಗೆ, ಮಿತ್ತೋಡಿ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದ ಕಾರಣ ಇಲ್ಲಿನ ತೋಡಿನಲ್ಲಿ ಭಾರಿ ಪ್ರಮಾಣದ ನೀರು ಹರಿಯಲು ಕಾರಣವಾಯ್ತು.


ನೀರು ಸದ್ಯ ನೀರು ಹರಿಯುವಿಕೆ ಪ್ರಮಾಣ ತಗ್ಗಿದ್ದು ಸಂಚಾರ ಸುಗಮಗೊಂಡಿದೆ. ಸೇತುವೆಯ ಬಳಿ ಜಮಾವಣೆ ಗೊಂಡ ಮರ ಜೆಸೆಬಿ ಬಳಸಿ ತೆರವು ಮಾಡಲಾಗಿರುವುದಾಗಿ ತಿಳಿದು ಬಂದಿದೆ.